ಕಿಕ್ ಬ್ಯಾಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಿಡಿಸಿದ ಬಾಂಬ್ ಠುಸ್ ಪಟಾಕಿಯಾಗಿದೆ ಎಂದು ಬಿಜೆಪಿ ನಾಯಕ ಗೋ.ಮಧುಸೂದನ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನ ಮಲ್ಲೆಶ್ವಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಏನೋ ದೊಡ್ಡ ಬಾಂಬ್ ಸಿಡಿಸ್ತಿನಿ ಅಂತ ಹೇಳಿದ್ದರು. ಆದರೆ, ಅವರು ಹಾಕಿರುವ ಬಾಂಬ್ ಠುಸ್ ಪಟಾಕಿಯಾಗಿದೆ. 2013ರಲ್ಲಿಯೇ ಈ ಆರೋಪ ಮಾಡಲಾಗಿತ್ತು. ಆದರೆ, 2014ರಲ್ಲಿ ಈ ಆರೋಪ ಸುಳ್ಳು ಎಂದು ತೀರ್ಪು ನೀಡಿತ್ತು ಎಂದು ಸ್ಪಷ್ಟಪಡಿಸಿದ್ದರು.
ದೊಡ್ಡ ಬಾಂಬ್ ಹಾಕುತ್ತೇನೆ ಎಂದು ರಾಹುಲ್ ಗಾಂಧಿ ಬಿಲ್ಡಪ್ ಕೊಟ್ಟಿದ್ದರು. ಆದರೆ, ಹಳೆ ಆರೋಪವನ್ನು ಮತ್ತೆ ಮಾಡಿದ್ದಾರೆ. ಈ ರೀತಿಯ ಆರೋಪ ಮಾಡುವ ಮೂಲಕ ಎಐಸಿಸಿ ಉಪಾಧ್ಯಕ್ಷರು ಮತ್ತೆ ಎಡವಿದ್ದಾರೆ ಎಂದರು.
ಸಹರಾ ಕಂಪನಿಯ ಡೈರಿಯಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಹೆಸರು ಸಹ ಇತ್ತು. ಕಂಪನಿಯ ಡೈರಿಯಲ್ಲಿ ಮೋದಿ ಅಂತಾ ಹೆಸರು ಇದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರೇ ಆಗಿರುತ್ತಾರಾ? ಎಂದು ಬಿಜೆಪಿ ನಾಯಕ ಗೋ.ಮಧುಸೂದನ್ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ