ಅನ್ನ ಭಾಗ್ಯ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳ ಮೂಲಕ ಗಮನ ಸೆಳೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ನವೆಂಬರ್ 1ರಿಂದ 1.40 ಕೋಟಿ ಕುಟುಂಬಗಳಿಗೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ ಒದಗಿಸುವ ಸಾರ್ವತ್ರಿಕ ಆರೋಗ್ಯ ಕಾರ್ಡ್ ಯೋಜನೆ ಆರಂಭಕ್ಕೆ ಮುಂದಾಗಿದೆ.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅಂಗೀಕಾರ ಸಿಕ್ಕಿದ್ದು, ವಾಜಪೇಯಿ ಆರೋಗ್ಯ ಶ್ರೀ, ಯಶಸ್ವಿನಿ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರಮುಖ 7 ಆರೋಗ್ಯ ಯೋಜನೆಗಳನ್ನ ಆರೋಗ್ಯ ಕಾರ್ಡ್ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ. ಅರ್ಹ ಫಲಾನುಭವಿಗಳು ಆಧಾರ್ ಕಾರ್ಡ್ ತೋರಿಸಿ ಈ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದಾಗಿದ್ದು, ನೋಂದಾವಣೆ ಬಳಿಕ ಸಾರ್ವತ್ರಿಕ ಹೆಲ್ತ್ ಕಾರ್ಡ್ ನೀಡಲಾಗುತ್ತೆ. ಬಳಿಕ ನಿಗದಿತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಾರೋಗ್ಯ ಸೇವೆ ಪಡೆಯಬಹುದಾಗಿದೆ.
ಸಹಕಾರ ಸಂಘಗಳಡಿ ಆರೋಗ್ಯ ಸೇವೆಗಳಲ್ಲಿ ನೋಂದಣಿ ಮಾಡಿಕೊಂಡಿರುವ 2.38 ಕೋಟಿ ಜನ ಇದಕ್ಕಾಗಿ ಹಣ ಪಾವತಿಸುವಂತಿಲ್ಲ. ುಳಿದವರು ಆನ್`ಲೈನ್ ಮೂಲಕ ಆಧಾರ್ ದಾಖಲೆಗಳ ಜೊತೆ ನೋಂದಾಯಿಸಿಕೊಳ್ಳಬಹುದಾಗಿದೆ. ಗ್ರಾಮೀಣ ಪ್ರದೇಶದ ಕುಟುಂಬ 300 ರೂ. ಮತ್ತು ನಗರ ಪ್ರದೇಶದ ಕುಟುಂಬಗಳು 700 ರೂ. ಹಣ ನಿಡಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ