ಕಲಬುರಗಿ ಮಹಾನಗರ ಪಾಲಿಕೆ ನೂತನ ಕಟ್ಟಡದ ಮೇಲೆ ಉರ್ದು ಬೋರ್ಡ್ ಉಳಿಸಿಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆದಿದೆ.
ಕಲಬುರಗಿ ಮಹಾನಗರ ಪಾಲಿಕೆ ನೂತನ ಕಟ್ಟಡ ಎದುರು ಸಿಪಿಐ(ಎಂ) ಕಾರ್ಯಕರ್ತರು ಧರಣಿ ನಡೆಸಿದರು. ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ, ಕರ್ನಾಟಕ ಸ್ಥಳೀಯ ಸಂಸ್ಥೆಗಳ(ಅಧಿಕೃತ ಭಾಷಾ) ಕಾಯ್ದೆ 1981ರಂತೆ ಕಲಂ 2ಬಿ ಪ್ರಕಾರ ಉರ್ದು ಭಾಷೆ ಬಳಕೆಗೆ ಅವಕಾಶವಿದೆ.
ಲೋಕಸಭಾ ಚುನಾವಣೆ ಹಿನ್ನೆಲೆ ವೋಟ್ ಬ್ಯಾಂಕ್‌ಗಾಗಿ ಉರ್ದು ಬೋರ್ಡ್‌ಗೆ ಬಿಜೆಪಿ ವಿರೋಧಿಸುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ರಾಜಕೀಯ ಲಾಭಕ್ಕಾಗಿ ಬಿಜೆಪಿಯವರು ಉರ್ದು ಬೋರ್ಡ್‌ಗೆ ವಿರೋಧಿಸುತ್ತಿದ್ದಾರೆಂದು ಆರೋಪಿಸಿದ ಅವರು, ಯಾವುದೇ ಕಾರಣಕ್ಕೂ ಪಾಲಿಕೆ ಕಚೇರಿ ಮೇಲಿನ ಉರ್ದು ಬೋರ್ಡ್ ತಗೆಯದಂತೆ ಮನವಿ ಮಾಡಿದರು. ಉರ್ದು ಬೋರ್ಡ್ ಅಳವಡಿಕೆ ಕುರಿತು ಪರ- ವಿರೋಧ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ನೂತನ ಕಟ್ಟಡಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.