Webdunia - Bharat's app for daily news and videos

Install App

ಪಾಕ್ ಪರ ಘೋಷಣೆ ಮಾಡಿರುವುದು ಬಿಜೆಪಿ ಎಫ್ ಎಸ್ ಎಲ್ ವರದಿಯಲ್ಲಿ ಸಾಬೀತು

geetha
ಸೋಮವಾರ, 4 ಮಾರ್ಚ್ 2024 (16:21 IST)
ಬೆಂಗಳೂರು : ನಜೀರ್‌ ಸಾಬ್‌ - ಪಾಕಿಸ್ತಾನ್‌ ಎಂಬ ಪದಗಳ ನಡುವೆ ಇರುವೆ ಸಾಮ್ಯತೆ ಮತ್ತು ವ್ಯತ್ಯಾಸವನ್ನು ಎಕೋಸ್ಟಿಕ್‌ ಪರೀಕ್ಷೆ ಹಾಗೂ ಸೌಂಡ್‌ ಎಂಜಿನೀರಿಂಗ್‌ ಮೂಲಕ ಪ್ರತ್ಯೇಕವಾಗಿ ಗುರುತಿಸಲಾಗಿದೆ. ವಿಡಿಯೋ ಕ್ಲಿಪ್‌ ನಲ್ಲಿರುವ ಜನಜಂಗುಳಿಯ ಸದ್ದು, ಬೇರೆ ಜಯಘೋಷಣೆಗಳು ಮತ್ತು ಮಾತುಕತೆಗಳನ್ನು ಡಿಲೀಟ್‌ ಮಾಡಿ ವಿಶ್ಲೇಷಣೆಗೊಳಪಡಿಸಲಾಗಿದೆ. ಜೊತೆಗೆ, ಘಟನೆಯ ವಿಡಿಯೋ ದೃಶ್ಯಾವಳಿಯನ್ನೂ ಸಹ ಫ್ರೇಂ ಟು ಪ್ರೇಂ ತನಿಖೆಗೆ ಒಳಪಡಿಸಲಾಗಿದೆ. 735 ಫ್ರೇಂಗಳ ಈ ವಿಡಿಯೋದಲ್ಲಿ ಯಾವುದೇ ದೃಶ್ಯವನ್ನು ತಿರುಚಿಲ್ಲ. ಸೇರಿಸಿಲ್ಲ ಹಾಗೂ ವಿರೂಪಗೊಳಿಸಿಲ್ಲ  ಎಂದು ವರದಿ ಖಚಿತಪಡಿಸಿದೆ. 
 
ದೃಶ್ಯಾವಳಿಯ ಆಡಿಯೋವನ್ನು ಈಕ್ವಿಲೈಸೇಷನ್‌ ಮೂಲಕ ವಿವಿಧ ಸ್ತರಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಪಾಕಿಸ್ತಾನ್ ಎಂಬ ಪದ ಬಳಕೆಯನ್ನು ಪ್ರತ್ಯೇಕಿಸಲಾಗಿದೆ. ಜೊತೆಗೆ ನಾಯ್ಸ್‌ ರಿಡಕ್ಷನ್‌ ಮೂಲಕ ಇತರೆ ಸದ್ದುಗಳನ್ನು ಅಳಿಸಿ ಹಾಕಿ ಸಂಪೂರ್ಣವಾಗಿ ಪಾಕ್‌ ಪರ ಘೋಷಣೆಯನ್ನು ಖಚಿತಪಡಿಸಿಕೊಳ್ಳಲಾಗಿದೆ. 

ವಿಧಾನಸೌಧದಲ್ಲಿ ರಾಜ್ಯಸಭಾ ಸದಸ್ಯ ನಜೀರ್‌ ಹುಸೇನ್‌ ಬೆಂಬಲಿಗರು ಪಾಕಿಸ್ತಾನದ ಪರ ಘೋಷಣೆ ಕೂಗಿರುವುದು ಬಿಜೆಪಿಯ ಖಾಸಗಿ ಎಫ್‌ಎಸ್‌ಎಲ್‌ ವರದಿಯಲ್ಲಿ ಧೃಡಪಟ್ಟಿದೆ. ಫಣೀಂದ್ರ. ಬಿ.ಎನ್‌. ಅವರ ಮಾಲಿಕತ್ವದ ಕ್ಲೂ ಫಾರ್‌ ಎವಿಡೆನ್ಸ್‌ ಎಂಬ ಸಂಸ್ಥೆ ನಡೆಸಿರುವ ವಿಧಿ ವಿಜ್ಞಾನ ಪರೀಕ್ಷೆಯ ವರದಿಯಲ್ಲಿ ವಿಡಿಯೋ ಮತ್ತು ಆಡಿಯೋ ಸಾಕ್ಷ್ಯಾಧಾರಗಳನ್ನು ತನಿಖೆಗೊಳಪಡಿಸಿ ವರದಿ ನೀಡಲಾಗಿದೆ. ಮಾಧ್ಯಮಗಳಲ್ಲಿ ಬಿತ್ತರಗೊಂಡ ಮೂವತ್ತು ಸೆಕೆಂಡ್‌ ಅವಧಿಯ ವಿಡಿಯೋ ಕ್ಲಿಪ್‌ ಅನ್ನು ದೃಶ್ಯ ಮತ್ತು ಶ್ರವಣ ಸಾಧನಗಳ ಮೂಲಕ ಕೂಲಂಕಷವಾಗಿ ಪರಿಶೀಲಿಸಲಾಗಿದೆ. 

ಪಾಕಿಸ್ತಾನ್‌ ಮತ್ತು ನಜೀರ್‌ ಸಾಬ್ ಎಂದು ಕೂಗುವಾಗ ಬರುವ ದನಿ ತರಂಗಗಳನ್ನು ಬೇರ್ಪಡಸಿ ಎರಡೂ ಶಬ್ದಗಳಲ್ಲಿರುವ “ಆನ್‌ “ ಮತ್ತು “ಆಬ್‌ “ ಎಂಬ ಅಂಕಿತದ ಶಬ್ದಗಳನ್ನು ಗುರುತಿಸಲಾಗಿದೆ. ಜೊತೆಗೆ,  ಆಪ್‌ -ಆನ್‌-ಆಬ್‌ ಮುಂತಾದ ಒಂದೇ ರೀತಿ ಧ್ವನಿಸುವ ಶಬ್ದಗಳನ್ನು ಗುರುತಿಸಿ ವೈಜ್ಞಾನಿಕ ಪರೀಕ್ಷೆಯ ಮೂಲಕ ಪರಿಶೀಲನೆ ನಡೆಸಿರುವುದಾಗಿ ವರದಿ ಹೇಳಿದೆ. ಕೊನೆಗೆ ವರದಿಯ ಫಲಿತಾಂಶದಲ್ಲಿ ಈ ವಿಡಿಯೋ ಯಾವುದೇ ರೀತಿಯ ತಿರುಚುವಿಕೆಗೆ ಒಳಗಾಗಿಲ್ಲ. ಈ ವಿಡಿಯೋದಲ್ಲಿರುವ ಧ್ವನಿ ಅದೇ ವಿಡಯೊದಲ್ಲಿ ಮುದ್ರಿತವಾಗಿದ್ದು, ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿರುವುದು ಸತ್ಯ ಎಂದು ಕೂಲಂಕಷವಾಗಿ ಪರಿಶೀಲಿಸಲಾಗಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments