Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚಂದ್ರಯಾನ-೩ ಯಶಸ್ಸಿಗೆ ಪ್ರಧಾನಿಗಳ ಪ್ರಶಂಸೆ..!

ಚಂದ್ರಯಾನ-೩ ಯಶಸ್ಸಿಗೆ ಪ್ರಧಾನಿಗಳ ಪ್ರಶಂಸೆ..!
bangalore , ಶನಿವಾರ, 26 ಆಗಸ್ಟ್ 2023 (17:50 IST)
ಚಂದ್ರಯಾನ ಯಶಸ್ವಿಯಾಗಿದ್ದಕ್ಕೆ ಪ್ರಧಾನಿಯವರು ಇಸ್ರೋ ವಿಜ್ಙಾನಿಗಳನ್ನ ಅಭಿನಂಧಿಸಿದ್ದಾರೆ..ಬೆಂಗಳೂರಿಗೆ ಆಗಮಿಸಿ ಮುಂಜಾನೆಯೇ ಪೀಣ್ಯದ ಇಸ್ರೋ ಬಾಹ್ಯಾಕಾಶ ಸಂಸ್ಥೆಗೆ ಭೇಟಿ ನೀಡಿ ಸನ್ಮಾನಿಸಿದ್ದಾರೆ..ಆದ್ರೆ ತಮ್ಮದೇ ಪಕ್ಷದ ರಾಜ್ಯ ನಾಯಕರನ್ನ ಪ್ರಧಾನಿಗಳು ಭೇಟಿಯನ್ನೇ ಮಾಡದೆ ತೆರಳಿದ್ದು ಕುತೂಹಲಕ್ಕೆ ಕಾರಣವಾಗಿದೆ..ಮತ್ತೊಂದು ಕಡೆ ಬ್ಯಾರಿಕೇಡ್ ಹಿಂದೆ ನಿಂತು ಜನಸಾಮಾನ್ಯರಂತೆ ಮೋದಿಯವರನ್ನ ಟಾಟಾ ಹೇಳಿದ್ದು ಮುಜುಗರಕ್ಕೂ ಎಡೆಮಾಡಿಕೊಟ್ಟಿದೆ.

ಚಂದ್ರಯಾನ-೩ ಉಡ್ಡಯನದ ವೇಳೆ ಪಿಎಂ ದಕ್ಚಿಣ ಆಫ್ರಿಕ ಪ್ರವಾಸದಲ್ಲಿದ್ರು..ಯಶಸ್ವಿಯಾಗಿದ್ದಕ್ಕೆ ಅಲ್ಲಿಂದಲೇ ವಿಜ್ಙಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದರು..ಇಂದು ಬೆಂಗಳೂರಿಗೆ ಆಗಮಿಸಿದ ಪೀಣ್ಯದ ಇಸ್ರೋ ಬಾಹ್ಯಕಾಶ ಸಂಸ್ಥೆಯಲ್ಲೇ ಎಲ್ಲರನ್ನ ಸನ್ಮಾನಿಸಿದ್ರು..ದೇಶಕ್ಕೆ ಕೀರ್ತಿ ತಂದ ವಿಜ್ಙಾನಿಗಳನ್ನ ಪ್ರಶಂಶಿಸಿದ್ರು..ಈ ಮೂಲಕ ಮತ್ತಷ್ಟು ಹೊಸ ಹೊಸ ಅನ್ವೇಷಣೆಗೆ ಪ್ರಧಾನಿಗಳು ವಿಜ್ಙಾನಿಗಳನ್ನ ಹುರಿದುಂಬಿಸಿದ್ರು

ಬೆಂಗಳೂರಿಗೆ ಬಂದ್ರೂ ರಾಜ್ಯ ಬಿಜೆಪಿ ನಾಯಕರನ್ನ ಪ್ರಧಾನಿಗಳು ಭೇಟಿ ಮಾಡ್ಲಿಲ್ಲ..ಸರ್ಕಾರಿ ಕಾರ್ಯಕ್ರಮವಾದ್ರೂ ಹೆಚ್ಎಎಲ್ ನಲ್ಲಿ ರಾಜ್ಯ ನಾಯಕರ ಜೊತೆ ಮಾತುಕತೆ ನಡೆಸಬಹುದಿತ್ತು..ಕನಿಷ್ಟ ರಾಜ್ಯ ನಾಯಕರನ್ನ ಭೇಟಿ ಮಾಡಬಹುದಿತ್ತು..ಆದ್ರೆ ಅದ್ಯಾವುದನ್ನೂ ಮಾಡಲಿಲ್ಲ..ಅತ್ತ ರಾಜ್ಯ ನಾಯಕರು ಪ್ರಧಾನಿಯವರನ್ನ ಹತ್ತಿರದಿಂದ ಭೇಟಿ ಮಾಡುವ ಪ್ರಯತ್ನವನ್ನೂ ಮಾಡ್ಲಿಲ್ಲ..ತಮ್ಮದೇ ನಾಯಕ ಬಂದ್ರೂ ಸಾಮಾನ್ಯರಂತೆ ಬ್ಯಾರಿಕೇಡ್ ಹಿಂದೆ ನಿಂತು ಕಣ್ತುಂಬಿಕೊಂಡಿದ್ದಷ್ಟೇ ಆಯ್ತು..ಆದ್ರೆ ಇದು ರಾಜ್ಯನಾಯಕರಿಗೆ ತೀರ್ವ ಮುಜುಗರ ತಂದಿದ್ದಂತೂ ಸುಳ್ಳಲ್ಲ.

ಪ್ರಧಾನಿಯವರ ಪ್ರೋಟೋಕಾಲ್ ವಿಚಾರದಲ್ಲಿ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ..ಸಿಎಂ,ಸಚಿವರು ಸ್ವಾಗತದ ಬದಲು ಅಧಿಕಾರಿಗಳನ್ನ ಕಳಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ..ಇದಕ್ಕೆ ಕಾಂಗ್ರೆಸ್ ನಾಯಕರಿಂದಲೂ ತೀರ್ವ ಆಕ್ರೋಶ ಹೊರಬಿದ್ದಿದೆ..ನಾವು ಪ್ರೋಟೋಕಾಲ್ ಉಲ್ಲಂಘನೆ ಮಾಡಿಲ್ಲ..ನಿಯಮದಂತೆ ಶಿಷ್ಟಾಚಾರ ನೀಡಿದ್ದೆವು..ಗೃಹ ಸಚಿವರ ಪರಮೇಶ್ವರ್ ರಿಸೀವ್ ಮಾಡೋಕೆ ರೆಡಿಯಾಗಿದ್ರು..ಆದ್ರೆ ಜನಪ್ರತಿನಿಧಿಗಳ ಸ್ವಾಗತ ಬೇಡವೆಂದು ಪ್ರಧಾನಿ ಸಚಿವಾಲಯದಿಂದಲೇ ಪತ್ರ ಬಂದಿದೆ..ಹಾಗಾಗಿ ಅಧಿಕಾರಿಗಳನ್ನ ಕಳಿಸಲಾಗಿದೆ ಅಂತ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ..ಪ್ರಧಾನಿ ಸಚಿವಾಲಯದಿಂದ ಬಂದ ಪತ್ರವನ್ನೂ ಬಿಡುಗಡೆಮಾಡಿ ಬಿಜೆಪಿಯವರಿಗೆ ಕನಿಷ್ಟ ಪರಿಜ್ಙಾನವೂ ಇಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ..ಆದ್ರೆ ಪರಮೇಶ್ವರ್ ಪ್ರೋಟೋಕಾಲ್ ವಿಚಾರವನ್ನ ಡಿಪಿಆರ್ ನೋಡಿಕೊಳ್ಳುತ್ತೆ ಅಂತ ಹೇಳಿದ್ದಾರೆ.

ಟೋ ಕಾಲ್ ವಿಚಾರದಲ್ಲಿ ಜನಪ್ರತಿನಿಧಿಗಳು ಬೇಡ ಅಂದಿದ್ದರ ಹಿಂದೆ ಬೇರೆ ಲೆಕ್ಕಾಚಾರಗಳಿವೆ..ರಾಜಕಾರಣಿಗಳನ್ನ ಆಹ್ವಾನಿಸಿದ್ದರೆ ಅದು ರಾಜಕೀಯ ಕಾರ್ಯಕ್ರಮವಾಗ್ತಿತ್ತು..ಆಗ ಮತ್ತಷ್ಡು ವಿವಾದಕ್ಕೀಡಬೇಕಾಗಿತ್ತು..ಹಾಗಾಗಿಯೇ ಎಲ್ಲರನ್ನ ದೂರ ವಿಟ್ರು ಅನ್ನೋ ಮಾತಿದೆ..ಇದ್ರಿಂದಾಗಿಯೇ ಕಾರ್ಯಕ್ರಮಕ್ಕು ರಾಜಕೀಯ ಲೇಪನ ಅಂಟಿಕೊಳ್ಳಲಿಲ್ಲ.ಒಟ್ನಲ್ಲಿ ಪ್ರಧಾನಿಗಳು ಬೆಂಗಳೂರಿಗೆ ಬಂದು ಇಸ್ರೋ ವಿಜ್ಙಾನಿಗಳನ್ನ ಸನ್ಮಾನಿಸಿದ್ರು..ಆದ್ರೆ ರಾಜ್ಯಕ್ಕೆ ಬಂದ್ರೂ ಸ್ಥಳೀಯ ಬಿಜೆಪಿ ನಾಯಕರನ್ನ ಭೇಟಿ ಮಾಡದೇ ತೆರಳಿದ್ರು..ಬ್ಯಾರಿಕೇಡ್ ಹಿಂಭಾಗದಲ್ಲಿ ನಿಂತು ಮೋದಿಯವರನ್ನ ಕಣ್ತುಂಬಿಕೊಂಡಿದ್ದಷ್ಟೇ ರಾಜ್ಯ ನಾಯಕರ ಸಾಧನೆ..ಆದ್ರೆ ಬ್ಯಾರಿಕೇಡ್ ಹಿಂದೆ ಜನಸಾಮಾನ್ಯರಂತೆ ನಿಂತಿದ್ದು‌ಮಾತ್ರ ಸಾಕಷ್ಟು ಮುಜುಗರಕ್ಕೀಡಾಗುವಂತೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಯಾವುದೇ BPL ಕಾರ್ಡ್ ರದ್ದು ಮಾಡುವುದಿಲ್ಲ-K H ಮುನಿಯಪ್ಪ