ದೇಶದ ಭದ್ರತೆ ಹಿತದೃಷ್ಟಿಯಿಂದಾಗಿ ರಾಷ್ಟ್ರದ ಮೂರು ಸೈನ್ಯಗಳ ನಡುವೆ ಒಬ್ಬನೇ ಮುಖಂಡ ಕಾರ್ಯನಿರ್ವಹಿಸಲಿದ್ದಾರೆ. ಹೀಗಂತ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
ಚೀಫ್ ಆಫಗ್ ಡಿಫೆನ್ಸ್ ಸ್ಟಾಫ್ ( ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ಹುದ್ದೆ ) ಸೃಷ್ಟಿ ಮಾಡೋ ಮೂಲಕ ಈಗಾಗಲೇ ಚಾಲ್ತಿಯಲ್ಲಿರೋ ಮೂರು ಸೇನೆಗಳ ನಡುವೆ ಸಮನ್ವಯತೆ ಸಾಧಿಸಲು ಸಾಧ್ಯವಾಗುತ್ತದೆ ಅಂತ ಮೋದಿ ಹೇಳಿದ್ದಾರೆ.
ಭೂಸೇನೆ, ವಾಯು ಸೇನೆ ಹಾಗೂ ನೌಕಾಪಡೆಗಳ ನಡುವೆ ಕೊಂಡಿಯಾಗಿ ಕೆಲಸ ಮಾಡಲು ಈ ಹುದ್ದೆ ಮಾಡಲಾಗುತ್ತಿದೆ. ಅನುಭವಿ ಹಾಗೂ ಹಿರಿಯ ಅಧಿಕಾರಿಯನ್ನ ಈ ಪೋಸ್ಟ್ ಗೆ ನೇಮಕ ಮಾಡಲಾಗುತ್ತೆ ಅಂತ ಹೇಳಿದ್ದಾರೆ.
ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶದ ಜನರನ್ನುದ್ದೇಶಿಸಿ ಮಾತನಾಡೋವಾಗ ಪ್ರಧಾನಿ ಮೋದಿ ಈ ಘೋಷಣೆ ಮಾಡಿದ್ದಾರೆ.