Select Your Language

Notifications

webdunia
webdunia
webdunia
webdunia

ಮಹಾತ್ಮ ಗಾಂಧಿ ಸಮಾದಿಗೆ ಪುಷ್ಪ ನಮನ ಸಲ್ಲಿಸಿದ-ಪ್ರಧಾನಿ ಮೋದಿ

ಮಹಾತ್ಮ ಗಾಂಧಿ ಸಮಾದಿಗೆ ಪುಷ್ಪ ನಮನ ಸಲ್ಲಿಸಿದ-ಪ್ರಧಾನಿ ಮೋದಿ
ರಾಜ್‌ ಘಾಟ್‌ , ಸೋಮವಾರ, 2 ಅಕ್ಟೋಬರ್ 2023 (21:07 IST)
ಪ್ರಧಾನಿ ನರೇಂದ್ರ ಮೋದಿ ಅವರು 154ನೇ ಗಾಂಧಿ ಜಯಂತಿಯ ಅಂಗವಾಗಿ ರಾಜ್‌ ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಗಾಂಧಿಯವರ ಮಾತುಗಳು ಹಾಗೂ ಆಲೋಚನೆಗಳು ಜಾಗತಿಕ ಮತ್ತು ಇಡೀ ಮಾನವಕುಲವನ್ನು ಏಕತೆ ಹಾಗೂ ಸಹಾನುಭೂತಿಯೆಡೆಗೆ ಪ್ರೇರೇಪಿಸುತ್ತದೆ ಎಂದು ಮೋದಿ ಹೇಳಿದ್ದಾರೆ. ಗಾಂಧಿ ಜಯಂತಿಯ ವಿಶೇಷ ಸಂದರ್ಭದಲ್ಲಿ ನಾನು ಮಹಾತ್ಮ ಗಾಂಧಿ ಅವರಿಗೆ ನಮಸ್ಕರಿಸುತ್ತೇನೆ. ಅವರ ಕಾಲಾತೀತ ಬೋಧನೆಗಳು ನಮ್ಮ ಹಾದಿಯನ್ನು ಬೆಳಗಿಸುತ್ತಲೇ ಇರುತ್ತವೆ. ಅವರ ಕನಸುಗಳನ್ನು ನನಸಾಗಿಸಲು ನಾವು ಯಾವಾಗಲೂ ಕೆಲಸ ಮಾಡೋಣ,ಇನ್ನು ಎಲ್ಲರೂ ಏಕತೆ ಮತ್ತು ಸೌಹಾರ್ದತೆಯನ್ನು ಬೆಳೆಸಿಕೊಳ್ಳಲಿ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂತ್ಯಸಂಸ್ಕಾರಕ್ಕೆ ಹೋದವರು ಮಸಣ ಸೇರಿದ್ರು!