Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಹಾದಾಯಿ ವಿವಾದಲ್ಲಿ ಪ್ರಧಾನಿ ಮಧ್ಯಪ್ರವೇಶ ಅಸಾಧ್ಯ– ಶೆಟ್ಟರ್

ಮಹಾದಾಯಿ ವಿವಾದಲ್ಲಿ ಪ್ರಧಾನಿ ಮಧ್ಯಪ್ರವೇಶ ಅಸಾಧ್ಯ– ಶೆಟ್ಟರ್
ಹುಬ್ಬಳ್ಳಿ , ಮಂಗಳವಾರ, 16 ಜನವರಿ 2018 (19:12 IST)
ಮಹಾದಾಯಿ ನೀರಿನ ‌ವಿವಾದದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ‌ಮಾಡುವುದು‌‌ ಅಸಾಧ್ಯ ಎಂದು ವಿಧಾನಸಭೆಯ ವಿರೋಧ ‌ಪಕ್ಷದ‌ ನಾಯಕ‌ ಜಗದೀಶ‌ ಶೆಟ್ಟರ್ ಹೇಳಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನಮೋಹನ್ ಸಿಂಗ್ ಪ್ರಧಾನಮಂತ್ರಿ ಆಗಿದ್ದಾಗ ತಮ್ಮಿಂದ ವಿವಾದ ಇತ್ಯರ್ಥ ‌ಕಷ್ಟ ಎನಿಸಿದ್ದರಿಂದಲೇ ಮಹದಾಯಿ ನ್ಯಾಯಮಂಡಳಿ‌ ರಚಿಸುವ‌ ಶಿಫಾರಸನ್ನು ಸುಪ್ರೀಂಕೋರ್ಟಿಗೆ ಮಾಡಿದ್ದರು. ಆದ್ದರಿಂದ ಈಗಿನ ಪರಿಸ್ಥಿತಿಯಲ್ಲಿ ಪ್ರಧಾನಮಂತ್ರಿ ಮಧ್ಯಪ್ರವೇಶಿಸುವುದು ಸಾಧ್ಯವಾಗಲ್ಲ ಎಂದಿದ್ದಾರೆ.
 
ಇಂದಿರಾಗಾಂಧಿ, ವಾಜಪೇಯಿ ಅವರು ಹಲವು ‌ನದಿ‌ ವಿವಾದಗಳನ್ನು ‌ಬಗೆಹರಿಸಿದ್ದಾರೆ‌ ಆದರೆ ಇಂದಿನ ‌ಪರಿಸ್ಥಿತಿ ಬೇರೆಯೇ ಆಗಿದೆ. ರಾಜ್ಯ‌ ಕಾಂಗ್ರೆಸ್ ‌ನಾಯಕರು ಗೋವಾ ಕಾಂಗ್ರೆಸ್ ನಾಯಕರನ್ನು ಒಪ್ಪಿಸುವತನಕ ವಿವಾದ ಇತ್ಯರ್ಥ ಆಗುವುದಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ‌ರಾಜಕಾರಣ‌‌ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜನಾರ್ಧನರೆಡ್ಡಿ ರಾಜಕೀಯಕ್ಕಿಳಿದರೆ ಹೈ.ಕ ಭಾಗದಲ್ಲಿ ಬಿಜೆಪಿಗೆ 20ಕ್ಕೂ ಅಧಿಕಸ್ಥಾನ– ಶ್ರೀರಾಮುಲು