Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕ್ಯಾನ್ಸರ್ ತಡೆಗೆ ಆಯುರ್ವೇದಿಕ್ ಸಂಶೋಧನೆ ಅಗತ್ಯ:ಶ್ರೀ ಶ್ರೀ ರವಿಶಂಕರ ಗುರೂಜಿ

ಕ್ಯಾನ್ಸರ್ ತಡೆಗೆ ಆಯುರ್ವೇದಿಕ್ ಸಂಶೋಧನೆ ಅಗತ್ಯ:ಶ್ರೀ ಶ್ರೀ ರವಿಶಂಕರ ಗುರೂಜಿ
ಬೆಂಗಳೂರು , ಸೋಮವಾರ, 8 ಅಕ್ಟೋಬರ್ 2018 (16:15 IST)
ಕ್ಯಾನ್ಸರ್ ನಂತಹ ಅಪಾಯಕಾರಿ ರೋಗಗಳ ಪತ್ತೆಗೆ ಆಯುರ್ವೇದದಲ್ಲಿ ಸಂಶೋಧನೆ ಮಾಡುವ ಅಗತ್ಯವಿದೆ ಎಂದು ಆರ್ಟ್ ಆಪ್ ಲೀವಿಂಗ್ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ ಗುರೂಜಿ ಹೇಳಿದ್ದಾರೆ.
ಶ್ರೀ ಶ್ರೀ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರೀಯ ಗುದರೋಗಗಳ (ಪ್ರೊಕ್ಟಾಲಜಿ) ಚಿಕಿತ್ಸಾ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಜೀವನ ಶೈಲಿಯಿಂದ ಅನೇಕ ಹೊಸ ಹೊಸ ರೋಗಗಳು ಬರುತ್ತಿದ್ದು, ಅವುಗಳ ಚಿಕಿತ್ಸೆಗೆ ಆಯುರ್ವೇದದಲ್ಲಿ ಸಂಶೋಧನೆ ನಡೆಸುವುದು ಅಗತ್ಯವಿದೆ ಎಂದು ಹೇಳಿದರು.
 
ಅಲ್ಲದೇ ಆಯುರ್ವೇದ ಮತ್ತು ಅಲೋಪತಿ ವೈದ್ಯ ಪದ್ದತಿಗಳ ಸಮ್ಮಿಲನ ಅತೀ ಅಗತ್ಯವಿದೆ. ಈ ನಿಟ್ಟಿನಲ್ಲಿ ಪೂರಕ ಬೆಳವಣಿಗೆಗಳು ನಡೆಯಬೇಕು ಎಂದು ಆಶಿಸಿದರು.
 
ಎರಡು ದಿನಗಳ ವಿಶೇಷ ಕಾರ್ಯಾಗಾರದಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು ೨೦ ಕ್ಕೂ ಹೆಚ್ಚು ಆಯುರ್ವೇದ ಮತ್ತ ಅಲೋಪತಿ ಶಸ್ತ್ರ ಚಿಕಿತ್ಸಕರು ತರಬೇತಿ ನೀಡಿದ್ದು, ಸುಮಾರು ಐವತ್ತಕ್ಕೂ ಹೆಚ್ಚು ಆಯುರ್ವೇದ ಶಸ್ತ್ರ ಚಿಕಿತ್ಸಕರು ಕಾರ್ಯಾಗಾರದಲ್ಲಿ ತರಬೇತಿ ಪಡೆದರು.
 
ಕಾರ್ಯಾಗಾರದಲ್ಲಿ ಹಿರಿಯ ಆಯುರ್ವೇದ ಚಿಕಿತ್ಸೆ ತಜ್ಞರಾದ ಡಾ ಮನೋರಂಜನ್ ಸಾಹು, ಡಾ. ರವಿಶಂಕರ ಪೆರ್ವಾಜೆ, ಡಾ.ಕ್ಷೀರಸಾಗರ್, ಶಲ್ಯ ತಂತ್ರ ವಿಭಾಗದ ಮುಖ್ಯಸ್ಥ ಡಾ.ಪಿ.ರಮೇಶ್ ಭಟ್ ಪಾಲ್ಗೊಂಡಿದ್ದರು.
 
ಹೆಚ್ಚಿನ ಮಾಹಿತಿಗಾಗಿ ಡಾ. ರಮೇಶ್ ಭಟ್ - 9845089261

Share this Story:

Follow Webdunia kannada

ಮುಂದಿನ ಸುದ್ದಿ

ಆಟೋರಿಕ್ಷಾಗಳಿಗೆ ಹೋಲೋಗ್ರಾಂ ಅಳವಡಿಕೆಗೆ ಕಡ್ಡಾಯ ಎಂದ ಡಿಸಿ