ಚುನಾವಣೆ ಫಲಿತಾಂಶ ಘೋಷಣೆ ಆದಾಗಿನಿಂದಲೂ ಗಂಟೆಗೊಂದರಂತೆ ಹೈಡ್ರಾಮಾ ನಡೆಯುತ್ತಿದ್ದ ಮಹಾರಾಷ್ಟ್ರದ ರಾಜಕೀಯ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ.
‘ಮಹಾ’ ರಾಜ್ಯಪಾಲರು ಮೊದಲಿಗೆ ಬಿಜೆಪಿಗೆ ಆ ನಂತರ ಶಿವಸೇನೆಗೆ ಅದಾದ ನಂತರ ಎನ್ ಸಿಪಿಗೆ ಸರಕಾರ ರಚನೆಗೆ ಆಹ್ವಾನ ನೀಡಿದ್ದರು.
ಆದರೆ ಯಾವೊಂದು ಪಾರ್ಟಿಯ ಮುಖ್ಯಸ್ಥರು ಸರಕಾರ ರಚನೆ ಮಾಡೋಕೆ ಮುಂದಾಗಿಲ್ಲ. ಹೀಗಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಲು ಶಿಫಾರಸ್ಸನ್ನು ಕೇಂದ್ರಕ್ಕೆ ಮಾಡಿದ್ದಾರೆ ‘ಮಹಾ’ ರಾಜ್ಯಪಾಲರು.
ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಇದೀಗ ಕೇಂದ್ರದ ಅಂಗಳಕ್ಕೆ ಚೆಂಡನ್ನು ಎಸೆದಿದ್ದಾರೆ. ಆ ಮೂಲಕ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತಾ ಅನ್ನೋ ಕುತೂಹಲ ಗರಿಗೆದರಿದೆ.