Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಪ್ರಾಪ್ತನ ಅಪಹರಣ ಯತ್ನ – ಜನರ ಕೈಗೆ ಸಿಕ್ಕಿಬಿದ್ದ ದುಷ್ಕರ್ಮಿಗಳಿಗೆ ಆಗಿದ್ದೇನು?

ಅಪ್ರಾಪ್ತನ ಅಪಹರಣ ಯತ್ನ – ಜನರ ಕೈಗೆ ಸಿಕ್ಕಿಬಿದ್ದ ದುಷ್ಕರ್ಮಿಗಳಿಗೆ ಆಗಿದ್ದೇನು?
ಚಿಕ್ಕೋಡಿ , ಬುಧವಾರ, 4 ಡಿಸೆಂಬರ್ 2019 (20:30 IST)
ಹಾಡಹಗಲೇ ಬಾಲಕನೊಬ್ಬನ ಅಪಹರಣಕ್ಕೆ ಯತ್ನಿಸಿದ ದುಷ್ಕರ್ಮಿಗಳು ಸಾರ್ವಜನಿಕರ  ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ರಾಯಭಾಗ ತಾಲೂಕಿನ ಮುಗಳಕೋಡ ಗ್ರಾಮದ ಏಳು ವರ್ಷದ ಅಪ್ರಾಪ್ತ ಬಾಲಕನಿಗೆ ಮದ್ಯ ಕುಡಿಸಿ, ಅಸ್ವಸ್ಥಗೊಂಡ ಆತನನ್ನು ಮುವತ್ತು ಕಿಲೋ ಮೀಟರ್ ದೂರದ ಅಥಣಿ ಪಟ್ಟಣಕ್ಕೆ ಕರೆತರಲಾಗಿತ್ತು. ಯಾವ ಉದ್ದೇಶಕ್ಕಾಗಿ ಬಾಲಕನ ಅಪಹರಣಕ್ಕೆ ಯತ್ನಿಸಲಾಗಿದೆ ಅನ್ನೋದು ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಾಗಿದೆ.

ಸಂಶಯಗೊಂಡು ಆರೋಪಿಗಳನ್ನು ಹಿಡಿದು ಸಾರ್ವಜನಿಕರು ವಿಚಾರಿಸಿದಾಗ ಪರಾರಿಯಾಗಲು ಯತ್ನಿಸಿದ ಇಬ್ಬರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೀದರ ಜಿಲ್ಲೆಯ ಬಾಲ್ಕಿ ತಾಲೂಕಿನ ವಿಷ್ಣಪ್ಪ ಹತ್ತಿಹಾಳ ಹಾಗೂ ಗುಲ್ಬರ್ಗ ಮೂಲದ ವಿಶ್ವನಾಥ ಪಾಟೀಲ ಇಬ್ಬರನ್ನೂ ಅಥಣಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. 



Share this Story:

Follow Webdunia kannada

ಮುಂದಿನ ಸುದ್ದಿ

ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮೀನಾಮೇಷ ಎಣಿಸೋದ್ಯಾಕೆ?