ಪತ್ರಕರ್ತೆ ಗೌರಿ ಲಂಕೆಶ್ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ರಾಘವೇಶ್ವರ ಶ್ರೀಗಳ ವಿರುದ್ಧ ಪ್ರೇಮಲತಾ ದಿವಾಕರ್ ಶಾಸ್ತ್ರೀ ದಂಪತಿ ದೂರು ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಹೌದು, ಗೌರಿ ಹತ್ಯೆಯಾದ ಕೆಲವೇ ದಿನಗಳಲ್ಲಿ ಎಸ್`ಐಟಿ ಅಧಿಕಾರಿಗಳನ್ನ ಭೇಟಿ ಮಾಡಿದ್ದ ಪ್ರೇಮಲತಾ ದಂಪತಿ 500 ದಾಖಲೆಗಳನ್ನ ನೀಡಿದ್ದಾರೆ. ರಾಮಚಂದ್ರಾಪುರ ಮಠದ ವಿರುದ್ಧ ಗೌರಿ ಲಂಕೇಶ್ ಬರೆದಿದ್ದ ಲೇಖನಗಳು ಸೇರಿದಂತೆ ಕೆಲ ದಾಖಲೆಗಳನ್ನ ನೀಡಿ ಸಂಶಯದ ಮೇಲೆ ತನಿಖೆ ಕೈಗೊಳ್ಳುವಂತೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ. ಆದರೆ, ಪ್ರೇಮಲತಾ ನೀಡಿರುವ ದಾಖಲೆಗಳನ್ನ ಎಸ್`ಐಟಿ ಸಂಪೂರ್ಣ ತನಿಖೆ ನಡೆಸಿದ್ದು, ಯಾವುದೇ ಸೂಕ್ತ ಸಾಕ್ಷಿಗಳು ಸಿಕ್ಕಿಲ್ಲ ಎನ್ನಲಾಗಿದೆ.
ಈ ಮಧ್ಯೆ, ಹಂತಕರ ಬಗ್ಗೆ ಸುಳಿವು ನೀಡುವಂತೆ ಎಸ್ಐಟಿ ನೀಡಿದ್ದ ದೂರವಾಣಿಗೆ ಬರುತ್ತಿರುವ ಕರೆಗಳು ತಲೆ ನೋವಾಗಿರುವುದಾಗಿಯೂ ಸಹ ತಿಳಿದು ಬಂದಿದೆ. ಯಾರಿಂದಲೂ ಸೂಕ್ತ ಸುಳಿವು ಲಭ್ಯವಾಗುತ್ತಿಲ್ಲ. ಅದರ ಬದಲು ಬಿಟ್ಟಿ ಸಲಹೆಗಳನ್ನ ನೀಡುತ್ತಿದ್ದಾರೆ. ಹಲವರು ಶ್ರೀಗಳ ವಿರುದ್ಧ ತನಿಖೆ ನಡೆಸುವಂತೆ ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ