ಡ್ರೋನ್ ಕುಖ್ಯಾತಿಯ ಪ್ರತಾಪ್ ಪೊಲೀಸರ ವಶವಾಗಿದ್ದಾನೆ.
ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿ ಮನೆಯಿಂದ ಹೊರಬಂದಿದ್ದ ಡ್ರೋನ್ ಕುಖ್ಯಾತಿಯ ಪ್ರತಾಪ್ ನನ್ನು ಮೈಸೂರಿನಲ್ಲಿ ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೊರ ಜಿಲ್ಲೆಗಳಿಗೆ ಭೇಟಿ ನೀಡಿದ್ದ ಪ್ರತಾಪ್, ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ. ಅಂಜನಾಪುರದ ಎಸ್.ಎಫ್-ಎಂ.ಐ.ಎಂ.ಜಿ ವಿಂಡ್ ಪಾಲ್ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ. ಇಲ್ಲೇ ಕ್ವಾರಂಟೈನ್ ನಲ್ಲಿರುವಂತೆ ಬಿಬಿಎಂಪಿ ಅಧಿಕಾರಿಗಳು ಸೂಚಿಸಿದ್ದರು. ಕೈಗೆ ಸೀಲ್ ಕೂಡಾ ಹಾಕಿದ್ದರು.
ಆದರೆ, ಪ್ರತಾಪ್ ಪ್ಲಾಟ್ ನಿಂದ ಹೊರಬಂದು ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ. ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪ್ರತಾಪ್ ನನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.