ನೈರುತ್ಯ ರೈಲ್ವೆ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಪ್ರಶಾಂತಕುಮಾರ ಮಿಶ್ರಾ ಅಧಿಕಾರ ಸ್ವೀಕಾರ ಮಾಡಿದ್ದಾರೆ.
1986 ರ ಬ್ಯಾಚ್ ಅಧಿಕಾರಿಯಾಗಿರುವ ಮಿಶ್ರಾ, ಧನಬಾದ್ ವಿಭಾಗದ ಪತ್ರಾಟು ಡಿಸೇಲ್ ಶೆಡ್ ನಲ್ಲಿ ಸಹಾಯಕ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಸೇವೆ ಆರಂಭಿಸಿದ್ದರು. ಹಲವು ಡಿವಿಜನ್ ಗಳ ಮೆಕ್ಯಾನಿಕಲ್ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ನಾರ್ಥ್ ಫ್ರಾಂಟಿಯರ್ ರೈಲ್ವೆಯ ಗುವಾಹಟಿಯಲ್ಲಿ ಮುಖ್ಯ ಮೋಟಿವ್ ಪವರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಈಸ್ಟರ್ನ್ ರೈಲ್ವೆಯಲ್ಲಿ ವಿಭಾಗೀಯ ವ್ಯವಸ್ಥಾಪಕರಾಗಿ ಅಸನೋಲ್ ನಲ್ಲಿ, ಮಲ್ಡಾ ವಿಭಾಗದಲ್ಲಿ ಡಿಆರ್ ಎಂ ಆಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ 8 ಲಕ್ಷ ಸಸಿ ನೆಟ್ಟಿರುವ ಹಿರಿಮೆ ಇವರದ್ದು. 100 ಕಿರುತೋಪು ನಿರ್ಮಿಸಿದ್ದಾರೆ. ಅಲ್ಲದೇ 95 ಮಳೆ ಕೊಯ್ಲು ಘಟಕಗಳನ್ನು ಮಾಡಿರೋದು ಇವರ ಮತ್ತೊಂದು ವಿಶೇಷತೆ. ಪಿ.ಕೆ.ಮಿಶ್ರಾ ಅವರು ಬಿ.ಬಿ.ಸಿಂಗ್ ಅವರ ಸ್ಥಾನ ತುಂಬಿದ್ದಾರೆ.
ನೈರುತ್ಯ ರೈಲ್ವೆಯಲ್ಲಿ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿದ್ದ ಬಿ.ಬಿ. ಸಿಂಗ್ ಅವರು ದಕ್ಷಿಣ ಕೇಂದ್ರಿಯ ರೈಲ್ವೆ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ವರ್ಗಾವಣೆಗೊಂಡಿದ್ದಾರೆ.