ಕೆಪಿಸಿಸಿ ನೂತನ ಪದಾಧಿಕಾರಿಗಳ ಸಮಾರಂಭ ಜೂನ್ 7 ಕ್ಕೆ ನಿಗದಿಯಾಗಿತ್ತು. ಆದರೆ ಮತ್ತೆ ಮುಂದೂಡಿಕೆ ಆಗಿರೋದಕ್ಕೆ ಡಿಕೆಶಿ ಅಸಮಧಾನ ಹೊರಹಾಕಿದ್ದಾರೆ.
ಪದಗ್ರಹಣ ಸಮಾರಂಭ ಪೂರ್ವ ನಿಯೋಜಿತವಾಗಿತ್ತು. ಸಿದ್ಧತೆಗಳು ವಿಭಿನ್ನವಾಗಿ ನಡೆಯುತ್ತಿದ್ದವು. ಆದರೆ ಲಾಕ್ ಡೌನ್ 5.0 ದಿಂದಾಗಿ ಮುಂದೂಡಿಕೆಯಾಗಿದ್ದು, ರಾಜಕೀಯ ಸಮಾರಂಭ ನಡೆಸಬಾರದು ಎಂದಿರೋದರಿಂದ ಹಿಂದೆ ರಾಜಕೀಯ ಹುನ್ನಾರ ಇದೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಕಾಂಗ್ರೆಸ್ ನ ಹಿರಿಯ ನಾಯಕರ ಸಮ್ಮುಖದಲ್ಲಿ ಸಭೆಗೆ ವಿಶೇಷವಾಗಿ ಸಿದ್ಧತೆ ನಡೆಸಲಾಗುತ್ತಿತ್ತು. ಕೆಪಿಸಿಸಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಪ್ರತಿಜ್ಞಾ ಎಂದು ಹೆಸರು ಇಡಲಾಗಿತ್ತು ಎಂದಿದ್ದಾರೆ.
ಶೀಘ್ರವೇ ಪ್ರತಿಜ್ಞಾ ಸಮಾರಂಭದ ಮುಂದಿನ ದಿನಾಂಕ ಪ್ರಕಟ ಮಾಡುವುದುದಾಗಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.