ಬೆಂಗಳೂರು ಅಂಚೆ ವಿಭಾಗವು ಹೊಸ ಸಾಹಸಕ್ಕೆ ಕೈಹಾಕಿದೆ! ಈವರೆಗೆ ನಡೆಸದ ಹೊಸ ಸೇವೆಯನ್ನು ಆರಂಭಿಸಿದ್ದು ಸಂಪೂರ್ಣವಾಗಿ ಅಸಾಂಪ್ರದಾಯಿಕ ವ್ಯಾಪಾರ ಉದ್ಯಮಕ್ಕೆ ಕಾಲಿಟ್ಟಿದೆ. ಇಡ್ಲಿ ಮತ್ತು ದೋಸೆ ಹಿಟ್ಟು ಸೇರಿದಂತೆ ಇನ್ಸ್ಟಂಟ್ ಆಹಾರ ತಯಾರಿಕಾ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆ ಆರಂಭಿಸಿದೆ. ಕಳೆದ ಸೋಮವಾರ ಬೆಂಗಳೂರಿನ ಕೆಲವು ಮನೆಗಳಿಗೆ ಅಂಚೆ ಇಲಾಖೆಯು ಮೊದಲ ಬ್ಯಾಚ್ ಪ್ಯಾಕೆಟ್ಗಳನ್ನು ವಿತರಿಸಿದೆ. ಈ ವ್ಯವಹಾರವನ್ನು ಕರ್ನಾಟಕ ಮತ್ತು ಇತರ ರಾಜ್ಯಗಳಾದ್ಯಂತ ವಿಸ್ತರಿಸಿದರೆ ಭವಿಷ್ಯದಲ್ಲಿ ಇಲಾಖೆಯು ದೊಡ್ಡ ಆದಾಯ ಗಳಿಸಲಿದೆ ಎಂದೇ ಹೇಳಲಾಗಿದೆ. ದೋಸೆ ಹಿಟ್ಟಿನ ಜೊತೆ ಬಿಸಿಬೇಳೆ ಬಾತ್, ಖಾರಾಬಾತ್, ಕೇಸರಿಬಾತ್ ಮಿಕ್ಸ್ಚರ್ಗಳು, ತುಪ್ಪದ ಪೊಂಗಲ್ನ ರೆಡಿ ಟು ಈಟ್ ಮಿಕ್ಸ್ಗಳು, ಚಟ್ನಿ ಪುಡಿಯನ್ನು ಇದುವರೆಗೆ ವಿತರಿಸಲಾಗಿದೆ.