ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ 75 ವರ್ಷ ಆಗಿದೆ ಎಂದು ಕೇಶವಕೃಪದಲ್ಲಿ ಇರುವವವರು ಕಾರಣ ಕೊಡುತ್ತಾರೆ. ಆದರೆ ಕೇರಳದಲ್ಲಿ 80 ವರ್ಷ ದಾಟಿದ ವ್ಯಕ್ತಿಯನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಾರೆ ಎಂದು ಲೇವಡಿ ಮಾಡಿದರು.
ನಾನು ಈ ಹಿಂದೆ ನಮ್ಮ ಮನೆಯಲ್ಲಿ ಪ್ರೆಸ್ ಮೀಟ್ ಕರೆದಾಗ ನಾನು ಹೇಳಿದ್ದೆ ರಾಜಕೀಯ ಇತಿಹಾಸ ಬದಲಾವಣೆ ಆಗುತ್ತೆ ಅಂತ. ಅದು ನಿಜವಾಗಿದೆ ಈಗ. ರಾಜೀನಾಮೆ ಈ ರೀತಿ ಪಡೆಯುವುದು ಸತ್ ಸಂಪ್ರದಾಯ ಅಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಜೂನ್, ಜುಲೈ, ಆಗಸ್ಟ್ ನಲ್ಲಿ ರಾಜಕೀಯ ವಿಕೇಂದ್ರೀಕೃತ ಆಗುತ್ತೆ ಎಂದು ಹೇಳಿದ್ದೆ. ಯಡಿಯೂರಪ್ಪ ಅವರನ್ನ ಪರಿಗಣಿಸಲ್ಲ. ಕೇಶವಕೃಪ, ಬಸವ ಕೃಪ ಅಂತ ಆಗಿದೆ. ಆದರೆ ಇಲ್ಲಿ ವಯಸ್ಸಾಯ್ತು ಅಂತ ಕಿತ್ತು ಹಾಕಿದ್ದಾರೆ. ಆರುವರೆ ಕೋಟಿ ಜನರು ಈ ಬದಲಾವಣೆ ಸಹಿಸಲ್ಲ. ಏಕಾಏಕಿ ರಾಜಕೀಯ ಒತ್ತಡ ಹಾಕಿ ಪಡೆಯೋದು ಸರಿಯಲ್ಲ ಎಂದು ಅವರು ಹೇಳಿದರು.
ಅಕ್ಟೋಬರ್ ನಲ್ಲಿ ಅಲ್ಪ ಸಂಖ್ಯಾತರ ಸಭೆ ನಡೆಯಲಿದೆ. ಅಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಲು ಏನು ಕ್ರಮ ಕೈಗೊಳ್ಳಬೇಕು ಅನ್ನೋದನ್ನ ಡಿಸೈಡ್ ಮಾಡ್ತೀವಿ. ಸೆಪ್ಟೆಂಬರ್ ನಲ್ಲಿ ವಲಸೆ ಸಚಿವರ ಸ್ಥಿತಿ ಶೋಚನೀಯ ಆಗಲಿದೆ ಎಂದು ಇಬ್ರಾಹಿಂ ಸುಳಿವು ನೀಡಿರು.
ಕನ್ನಡಿಗರು ನೀಡುವವರು, ಬೇಡುವವರಲ್ಲ ಎಂಬುದಕ್ಕೆ ಯಡಿಯೂರಪ್ಪ ರಾಜ್ಯಪಾಲರ ಸ್ಥಾನ ನಿರಾಕರಿಸಿರುವುದೇ ಕಾರಣ. ಯಡಿಯೂರಪ್ಪ ಮೇಲೆ ಆರೋಪ, ಪ್ರತ್ಯಾರೋಪ ಇರಬಹುದು ಅದು ಬೇರೆ. ಯಡಿಯೂರಪ್ಪ ಒರಿಜಿನಲ್ ಕಾಪಿ ಇಲ್ಲ, ಝೆರಾಕ್ಸ್ ತಗೊಂಡ್ ಏನು ಮಾಡೋದು? ಸಿಎಂ ಯಾರೇ ಆಗಲಿ, ಅದನ್ನ ನಮ್ಮ ಜನ ಒಪ್ಪಲ್ಲ. ರಾಜ್ಯದಲ್ಲಿ ಹೊಸ ಪರ್ವ ಶುರುವಾಗಲಿದೆ. ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಬರಲಿಲ್ಲ. ಮಠದ ದಾಸೋಹಿ ನಾನು, ಯಡಿಯೂರಪ್ಪ ಭೇಟಿ ಆಗಲು ಬಂದೆ. ನಮ್ಮ ನಾಡು, ನಮ್ಮ ನೆಲ, ನಮ್ಮ ಜಲ ನಮ್ಮ ನಾಯಕನನ್ನ ಆಯ್ಕೆ ಮಾಡಬೇಕಿದೆ. ಸೆಪ್ಟೆಂಬರ್ ನಂತರ ಎಲ್ಲವೂ ಗೊತ್ತಾಗಲಿದೆ ಎಂದು ಅವರು ಹೇಳಿದರು.