ದೇಶದ ನಂಬರ್ 1 ಶಾಲೆ ಕೇಂದ್ರೀಯ ವಿದ್ಯಾಲಯದ ಕಾಮುಕ ಪ್ರಿನ್ಸಿಪಾಲ್‌ಗೆ ಪೊಲೀಸರೇ ಬೆನ್ನುಲುಬಾಗಿ ನಿಂತು ರಕ್ಷಿಸಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದ ಲಜ್ಜೆಗೆಟ್ಟ ಕಾಮುಕ ಪ್ರಿನ್ಸಿಪಾಲ್ ಕುಮಾರ್ ಠಾಕೂರ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರೋದು ಬಹಿರಂಗವಾಗಿದ್ದು, ಈತನ ರಕ್ಷಣೆಗೆ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ನಿಂತಿರುವುದು ವಿಪರ್ಯಾಸದ ಸಂಗತಿಯೇ ಸರಿ.
ಕಳೆದ ಮೂರು ವರ್ಷಗಳಿಂದ ಪ್ರಿನ್ಸಿಪಾಲ್ ಕುಮಾರ್ ಠಾಕೂರ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ದಯವಿಟ್ಟು ಮಕ್ಕಳ ಜೀವನ ಉಳಿಸಿ ಎಂದು ಕೇಂದ್ರೀಯ ವಿದ್ಯಾಲಯದ ಶಿಕ್ಷಕಿಯರು ನೊಡಲ್ ಚೈಲ್ಡ್‌ಲೈನ್‌ಗೆ ಕರೆ ಮಾಡಿ ದೂರು ದಾಖಲಿಸಿದ್ದರು. ತಕ್ಷಣವೇ ಚೈಲ್ಡ್‌ಲೈನ್ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿಸಿ ತನಿಖೆ ನಡೆಸಲು ಸೂಚಿಸಿದ್ದರು.
ಪ್ರಕರಣ ಕುರಿತು ದೂರು ನೀಡಿರುವ ಶಿಕ್ಷಕಿಯರನ್ನು ಹಾಗೂ ಲೈಂಗಿಕ ದೌರ್ಜನ್ಯಕೊಳ್ಳಗಾದ ಏಳು ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದು, ಲೈಂಗಿಕ ಕಿರುಕುಳ ನಡೆದಿರುವುದನ್ನು ಸಾಬೀತು ಪಡೆಸಿದ್ದರು. ಆದರೆ, ಈ ವಿಷಯವನ್ನು ಮಾಧ್ಯಮಕ್ಕೆ ಮಾಹಿತಿ ನೀಡದಂತೆ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಗೌಪ್ಯವಾಗಿಡಲು ಆದೇಶ ನೀಡಿದ್ದರು ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ