ಅವರು ನಿತ್ಯ ಲಾಠಿ ಹಿಡಿಯುತ್ತಿದ್ದವರು. ಆದರೆ ಕೈಯಲ್ಲಿ ಏಕಾಏಕಿಯಾಗಿ ಹಾರೆ ಹಿಡಿದಿದ್ದರು. ಲಾಠಿ ಹಿಡಿಯುವ ಕೈ ಹಾರೆ ಹಿಡಿದಿರುವುದನ್ನು ಕಂಡು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಲಾಠಿ ಹಿಡಿಯುವ ಕೈ ಹಾರೆ ಹಿಡಿದು ರಸ್ತೆ ಹೊಂಡ ಮುಚ್ಚಿ ಸಾರ್ವಜನಿಕರ ಪ್ರಶಂಸೆ ಗೆ ಪಾತ್ರರಾಗಿರುವ ಅಪರೂಪದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.
ಮಾಣಿ- ಮೈಸೂರ್ ರಸ್ತೆಯ ಪೆರಾಜೆ ಬಳಿ ಸುಳ್ಯ ಠಾಣಾ ಎಸ್ ಐ ಮಂಜುನಾಥ ಅವರು ಹೊಂಡ ಮುಚ್ಚುವ ಕೆಲಸಕ್ಕೆ ಸಾಮಗ್ರಿ ಕೊಂಡು ಹೋಗಿ ಸ್ವತಃ ಹಾರೆ ಹಿಡಿದು ಹೊಂಡ ಮುಚ್ಚಿದ್ದಾರೆ. ಅವರು ಕೆಲಸ ಮಾಡುತ್ತಿರುವ ದ್ರಶ್ಯ ವನ್ನು ಸಾರ್ವಜನಿಕರು ಸೆರೆ ಹಿಡಿದಿದ್ದು ಸಾಮಾಜಿಕ ಜಾಲ ತಾಣ ಗಳಲ್ಲಿ ವೈರಲ್ ಆಗಿದೆ. ಕಳೆದ ಹಲವು ದಿನಗಳಿಂದ ಮಾಣಿ ಮೈಸೂರು ಹೆದ್ದಾರಿಯಲ್ಲಿ ಪೆರಾಜೆ ಯಲ್ಲಿ ರಸ್ತೆ ಮದ್ಯ ಭಾಗದಲ್ಲಿ ಹೊಂಡವೊಂದು ವಾಹನ ಸಂಚಾರಕ್ಕೆ ಅಪಾಯಕಾರಿ ಅಗಿ ಪರಿಣಮಿಸಿತ್ತು.
ಪ್ರಯಾಣಿಕರು ಈ ಬಗ್ಗೆ ಅಳಲು ತೋಡಿಕೊಂಡಿದ್ದರು. ಎಸ್ ಐ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.