Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹನಿಟ್ರ್ಯಾಪ್ ಗ್ಯಾಂಗ್ ಮೇಲೆ ಪೊಲೀಸ್ ಅಟ್ಯಾಕ್

ಹನಿಟ್ರ್ಯಾಪ್ ಗ್ಯಾಂಗ್ ಮೇಲೆ ಪೊಲೀಸ್ ಅಟ್ಯಾಕ್
ಬೆಳಗಾವಿ , ಶನಿವಾರ, 23 ನವೆಂಬರ್ 2019 (22:20 IST)
ಹುಡುಗಿಯರ ಪೋಟೋ ತೋರಿಸಿ ಹುಡುಗಿಯರ ಜೊತೆ ಸಲುಗೆಯಿಂದ ಮಾತನಾಡಲು ಅವಕಾಶ ಮಾಡಿಕೊಟ್ಟು ಅದನ್ನು ವಿಡಿಯೋ ಚಿತ್ರಿಕರಣ ಮಾಡಿ ಹನಿಟ್ರ್ಯಾಪ್ ಮಾಡುತ್ತಿದ್ದವರಿಗೆ ಆಗಬಾರದ್ದು ಆಗಿದೆ.

ಮುಗ್ಧರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಏಳು ಜನ ಖದೀಮರನ್ನು ಅರೆಸ್ಟ್ ಮಾಡುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಎಸಿಪಿ ನಾರಾಯಣ ಭರಮಣಿ ಮತ್ತು ಮಹಾಂತೇಶ್ವ ಜಿದ್ದಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಹನಿಟ್ರ್ಯಾಪ್  ಮೂಲಕ  ಜನರನ್ನು ದೋಚುತ್ತಿದ್ದ ಗ್ಯಾಂಗ್ ಬಂಧಿಸಿ ಜೈಲಿಗೆ ಶಿಫ್ಟ್ ಮಾಡಿದ್ದಾರೆ.

ಈ ಹನಿ ಟ್ರ್ಯಾಪ್ ಕೇಸ್ ನಲ್ಲಿ ಓರ್ವ ಪತ್ರಕರ್ತ ಮತ್ತು ಕನ್ನಡ ಸಂಘಟನೆಯ ರಾಜ್ಯ ಸಂಚಾಲಕರೊಬ್ಬರು ಬಂಧನಕ್ಕೊಳಗಾಗಿದ್ದು ವಿಶೇಷವಾಗಿದೆ.

ಹನಿ ಟ್ರ್ಯಾಪ್ ಆರೋಪಿಳು
1) ವಿದ್ಯಾ ಪಾಂಡುರಂಗ ಹವಾಲ್ದಾರ್
2)ದೀಪಾ ಸಂದೀಪ ಪಾಟೀಲ, ಮಹಾದ್ವಾ ರೋಡ ಬೆಳಗಾವಿ
3) ಮಂಗಲಾ ದಿನೇಶ್ ಪಾಟೀಲ, ಕೋರೆ ಗಲ್ಲಿ ಶಹಾಪೂರ
4) ಮನೋಹರ ಅಪ್ಪಾಸಾಹೇಬ್ ಪಾಯಕ್ಕನವರ, ಹಲಗಾ
5) ನಾಗರಾಜ ರಾಮಚಂದ್ರ ಕಡಕೋಳ, ಬಸವನ ಕುಡಚಿ ದೇವರಾಜ ಅರಸ ಕಾಲನಿ ಇತ ಜುಲ್ಮ ಏ ಜಂಗ್ ಪತ್ರಿಕೆಯ ಸಂಪಾದಕ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಚಾಲಕ

6) ಸಚಿನ್ ಮಾರುತಿ ಸುತಗಟ್ಟಿ, ಸಹ್ಯಾದ್ರಿ ನಗರ ಬೆಳಗಾವಿ
7) ಮಹ್ಮದ ಯುಸೂಫ್ ಮೀರಾಸಾಬ ಕಿತ್ತೂರ, ಹಲಗಾ

ಈ ಏಳು ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು  ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಜನರನ್ನು ದೇವರೇ ಕಾಪಾಡಬೇಕು ಎಂದ ಕುಮಾರಸ್ವಾಮಿ