ಆರೆಸ್ಸೆಸ್ ಕಾರ್ಯಕರ್ತರ ಹತ್ಯೆ ಖಂಡಿಸಿ ಬಿಜೆಪಿ ಮಾಡಲು ಉದ್ಧೇಸಿಸಿದ್ದ ಬೈಕ್ ರ್ಯಾಲಿ ಬೆಂಗಳೂರಿನಲ್ಲೇ ಪೊಲಿಸರು ತಡೆ ಒಡ್ಡಿದ್ದಾರೆ. ಫ್ರೀಡಂಪಾರ್ಕ್`ನಿಂದ ಹೊರಟಿದ್ದ ಬೈಕ್ ರ್ಯಾಲಿ ತಡೆದ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನ ವಶಕ್ಕೆ ಪಡೆದಿದ್ದಾರೆ.
ಜಾಥಾ ತಡೆದ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ ಬಳಿ ಹೈಡ್ರಾಮವೇ ನಡೆದುಹೋಗಿದೆ. ಒಂದೆಡೆ ಕಾರ್ಯಕರ್ತರನ್ನ ಬಂಧಿಸಿದ ಪೊಲೀಸರು, ಬಳಿಕ ಬಿಜೆಪಿ ಮುಖಂಡ ಆರ್. ಅಶೋಕ್ ಮತ್ತು ಸಂಸದ ಪ್ರತಾಪ್ ಸಿಂಹ, ವಿ. ಸೋಮಣ್ಣ ಸೇರಿದಂತೆ ನಾಯಕರನ್ನ ಬಂಧನಕ್ಕೆ ಮುಂದಾದಾಗ ಪೊಲೀಸರ ವಿರುದ್ಧವೇ ಆರ್. ಅಶೋಕ್ ಕಿಡಿ ಕಾರಿದ್ದಾರೆ. ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿರುವ ಆರ್. ಅಶೋಕ್ ನನ್ನನ್ನ ಬಂಧಿಸಲು ನಿಮ್ಮ ಬಳಿ ವಾರೆಂಟ್ ಇದೆಯಾ..? ಎಂದು ಪ್ರಶ್ನಿಸಿದ್ದಾರೆ. ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ರ್ಯಾಲಿಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಬಳಿಕ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಇದೀಗ, ಆರ್. ಅಶೋಕ್ ಸೇರಿದಂತೆ ಹಲವು ನಾಯಕರನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಫ್ರೀಡಂಪಾರ್ಕ್ ಪರಿಸ್ಥಿತಿಯನ್ನ ಪೊಲೀಸರು ಹತೋಟಿಗೆ ತಂದಿದ್ದಾರೆ. ಈ ಮಧ್ಯೆ, ರ್ಯಾಲಿಗೆ ಚಾಲನೆ ನೀಡಬೇಕಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ಪೊಲೀಸರು ಮನೆಯಲ್ಲೇ ತಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ