ಬೆಂಕಿ ಹಚ್ಚಿ ಪ್ರಿಯಕರನನ್ನು ಹತ್ಯೆಗೈದಿದ್ದ ಪ್ರೇಯಸಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಪ್ರಿಯಕರ ಮನ್ಸೂರ್ ವಿವಾಹವಾಗಲು ನಿರಾಕರಿಸಿದ್ದರಿಂದ ನವೆಂಬರ್ 28 ರಂದು ಪ್ರೇಯಸಿ ಶೃತಿ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಳು. ಘಟನೆಯಲ್ಲಿ ಮನ್ಸೂರ್ ಸಾವನ್ನಪ್ಪಿದ್ದನು.
ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಮನ್ಸೂರ್ ಮತ್ತು ಶೃತಿ ದೈಹಿಕ ಸಂಬಂಧವನ್ನು ಹೊಂದಿದ್ದರು. ಇದರಿಂದ ಶೃತಿ ಗರ್ಭಿಣಿಯಾದಾಗ ತಾನೇ ಆಕೆಯ ಪತಿ ಎಂದು ಆಸ್ಪತ್ರೆಯ ವೈದ್ಯರಿಗೆ ತಿಳಿಸಿ ಗರ್ಭಪಾತ ಮಾಡಿಸಿದ್ದನು.
ಕಾಟನ್ಪೇಟೆಯ ಲಾಡ್ಜೊಂದರ 209 ಸಂಖ್ಯೆಯ ಕೋಣೆಯಲ್ಲಿ ತಂಗಿದ್ದ ಪ್ರೇಮಿಗಳ ನಡುವೆ ವಾಗ್ವಾದ ವಿಕೋಪಕ್ಕೆ ತೆರಳಿದಾಗ ಶೃತಿ, ಪ್ರಿಯಕರ ಮನ್ಸೂರ್ನ ಮೇಲೆ ಮೊದಲೆ ತಂದಿಟ್ಟಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಮನ್ಸೂರ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ.
ಕಾಟನ್ಪೇಟೆಯ ಪೊಲೀಸರು ಶೃತಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ನ್ಯಾಯಾಂಗದ ವಶಕ್ಕೆ ಒಪ್ಪಿಸಲಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.