ಕಳೆದ ಮೂರು ದಿನಗಳ ಹಿಂದೆ 7.5 ಕೋಟಿ ಹಣ ದೋಚಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಕೊಡುಗು ಜಿಲ್ಲೆ ಸೋಮುವಾರಪೇಟೆ ತಾಲೂಕಿನ ಕಂಬಾರಗಡಿಗೆ ಗ್ರಾಮದಲ್ಲಿ ಬಂಧಿಸಿದ್ದಾರೆ.
ಮಂಗಳೂರಿನಿಂದ ಬೆಂಗಳೂರಿನ ಎಕ್ಸಿಸ್ ಬ್ಯಾಂಕ್‌ಗೆ ಹಣ ತರುವಾಗ ಆರೋಪಿಗಳು ಮಾರ್ಗಮಧ್ಯದಲ್ಲಿಯೇ ಹಣದೊಂದಿಗೆ ಪರಾರಿಯಾಗಿದ್ದರು. ಪೊಲೀಸರು ಮೂರು ದಿನಗಳಿಂದ ಆರೋಪಿಗಳ ಶೋಧಕಾರ್ಯದಲ್ಲಿ ತೊಡಗಿದ್ದರು.
ಆರೋಪಿಗಳಿಂದ 6 ಕೋಟಿ 70 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಹಣವನ್ನು ಪುಷ್ಪಗಿರಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಡಗಿಸಿಟ್ಟಿದ್ದರು. ಹಣವನ್ನು ಮಂಗಳೂರಿನಿಂದ ಬೆಂಗಳೂರಿಗೆ ತರುವಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ವಾಹನದ ಚಾಲಕ ಕರಿಬಸಪ್ಪ, ಸೆಕ್ಯೂರಿಟಿ ಗಾರ್ಡ್‌ಗಳಾದ, ಪೂವಣ್ಣ, ಬಸಪ್ಪ, ಪರಶುರಾಮ್ ಶಾಹು, ಕೊಡಗಿನ ಕಾಶಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳ ಮೊಬೈಲ್ ನೆಟ್‌ವರ್ಕ್ ಆಧರಿಸಿ ಎಸಿಪಿ ವಾಲೆಂಟಿನ್ ಡಿಸೋಜಾ ನೇತೃತ್ವದ ತಂಡ ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ಭೀಮಯ್ಯನ ಬಂಧನಕ್ಕಾಗಿ ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.