Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಧಿಕಾರಿಗಳನ್ನು ಮರ್ಡರ್ ಮಾಡಲು ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ

ಅಧಿಕಾರಿಗಳನ್ನು ಮರ್ಡರ್ ಮಾಡಲು ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ
ಬೆಂಗಳೂರು , ಶನಿವಾರ, 21 ಮೇ 2016 (19:12 IST)
ಮೂವರು ಅಧಿಕಾರಿಗಳನ್ನು ಕೊಲೆ ಮಾಡಲು ಅನುಮತಿ ಕೋರಿ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಅಧಿಕಾರಿ ಎಂ.ಎಸ್ ಮೋಕ್ಷ ಕುಮಾರ್ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಪತ್ರ ಬರೆದಿದ್ದಾರೆ.
ಚಿತ್ರದುರ್ಗ ಜಿಲ್ಲಾ ಪಂಚಾಯತ ಅಧಿಕಾರಿ ಮೋಕ್ಷ ಕುಮಾರ್ ಫೆಬ್ರುವರಿ 20, 2015 ರ ಸಾಲಿನಲ್ಲಿ ಸೇವೆಯಿಂದ ಅಮಾನತುಗೊಂಡಿದ್ದರು. ತಮ್ಮ ಅಮಾನತು ಆದೇಶವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಪತ್ರ ಬರೆದಿದ್ದರು.
 
ರಾಜ್ಯಪಾಲರು ಅಮಾನತು ಆದೇಶವನ್ನು ಹಿಂಪಡೆಯುವಂತೆ ಸೂಚಿಸಿದರೂ ಸಹ ಅಧಿಕಾರಿಗಳು ತಮ್ಮ ಅಮಾನತು ಆದೇಶವನ್ನು ತೆರವುಗೊಳಿಸಲ್ಲವೆಂದು ಜಿಗುಪ್ಸೆಗೊಂಡು ಮೋಕ್ಷ ಕುಮಾರ್, ಅಧಿಕಾರಿಗಳಾದ ಚಂದ್ರಶೇಖರ್, ಶ್ರೀಧರ ಮತ್ತು ಸುನೀಲ್ ಕುಮಾರ್ ಅವರನ್ನು ಕೊಲೆ ಮಾಡಲು ಅನುಮತಿ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಪತ್ರ ಬರೆದಿದ್ದಾರೆ.
 
ಜಿಲ್ಲಾ ಪಂಚಾಯತ ಅಧಿಕಾರಿ ಮೋಕ್ಷ ಕುಮಾರ್, 2009 ಮತ್ತು 2010 ರ ಸಾಲಿನಲ್ಲೂ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತಾಗಿದ್ದರು ಎಂದು ತಿಳಿದು ಬಂದಿದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಬಿಡಿ, ನಿತೀಶ್ ಕುಮಾರ್‌ ಮುಖ್ಯಮಂತ್ರಿಯಾಗಲು ಲಾಯಕ್ಕಿಲ್ಲ: ಆರ್‌ಜೆಡಿ ಸಂಸದ