Webdunia - Bharat's app for daily news and videos

Install App

ಪ್ಲೇ ಸ್ಟೋರ್ ಆ್ಯಪ್ ಡೌನ್ಲೋಡ್ ಮಾಡುವ ಮುನ್ನ ಎಚ್ಚರ.!!!

Webdunia
ಭಾನುವಾರ, 11 ಸೆಪ್ಟಂಬರ್ 2022 (16:16 IST)
40 ಆಯಪ್​ಗಳ ಬಗ್ಗೆ ಎಚ್ಚೆತ್ತುಕೊಂಡಿರುವ ಗೂಗಲ್ ಪ್ಲೇ ಸ್ಟೋರ್ ಅವುಗಳನ್ನು ಡಿಲೀಟ್ ಮಾಡಿವೆ. ಈಗಾಗಲೇ ಅದನ್ನು ಡೌನ್​ಲೋಡ್ ಮಾಡಿರುವ ಬಳಕೆದಾರರು ತಕ್ಷಣವೇ ಡಿಲೀಟ್ ಮಾಡುವಂತೆ ಕೇಳಿಕೊಂಡಿದೆ.
ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಳಕೆದಾರರು ಉಪಯೋಗಿಸುವ ಗೂಗಲ್ಪ್ಲೇ ಸ್ಟೋರ್ (Google Play Store)​ ನಲ್ಲಿ ನಕಲಿ ಆಯಪ್​ಗಳ (Fake App) ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ . ಈಗಾಗಲೇ ಅನೇಕ ಬಾರಿ ಗೂಗಲ್ (Google) ತನ್ನ ಪ್ಲೇ ಸ್ಟೋರ್​ನಿಂದ ಅಪಾಯಕಾರಿ ಆಯಪ್​ಗಳನ್ನು ಕಿತ್ತೆಸೆದಿದೆ . ಈಗ ಮತ್ತೆ ಕೆಲವೊಂದು ಅಪ್ಲಿಕೇಶನ್​​​ಗಳಲ್ಲಿ ಗೂಗಲ್ ಮಾಲ್ವೇರ್​ ಅನ್ನು ಪತ್ತೆಹಚ್ಚಿದ್ದು ,​ ಇದನ್ನು ಉಪಯೋಗಿಸುತ್ತಿರುವರಿಗೆ ಎಚ್ಚರಿಕೆ ನೀಡಿದೆ . ಅಲ್ಲದೆ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಕಂಡುಬಂದಿರುವ ಹೊಸ 40 ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಪರಿಶೀಲಿಸಿ ಅವುಗಳನ್ನು ನೀವು ಇನ್​ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್​ ಮಾಡುವಂತೆ ಸೂಚನೆ ನೀಡಿದೆ 
ಇದರಲ್ಲಿ ಹೆಚ್ಚಿನ ಆಯಪ್​ಗಳು ಜೋಕರ್ ಮಾಲ್ವೆರ್ ಮೂಲಕ ಕೆಲಸ ಮಾಡುತ್ತದಂತೆ. ಇದು ಬಳಕೆದಾರರ ಫೇಸ್​ಬುಕ್ ಬಗೆಗಿನ ಮಾಹಿತಿ, ಎಸ್​ಎಮ್​ಎಸ್ ಮಾಹಿತಿ, ಕಾಂಟೆಕ್ಟ್​ ಲಿಸ್ಟ್, ನಿಮ್ಮ ಮೊಬೈಲ್ ಬಗೆಗಿನ ಮಾಹಿತಿ ಸೇರಿದಂತೆ ಅನೇಕ ವಿಚಾರವನ್ನು ಕದಿಯುತ್ತದೆ.
 
ಇದೀಗ ಈ 40 ಆಯಪ್​ಗಳ ಬಗ್ಗೆ ಎಚ್ಚೆತ್ತುಕೊಂಡಿರುವ ಗೂಗಲ್ ಪ್ಲೇ ಸ್ಟೋರ್ ಅವುಗಳನ್ನು ಡಿಲೀಟ್ ಮಾಡಿವೆ. ಇನ್ನು ಈಗಾಗಲೇ ಅದನ್ನು ಡೌನ್​ಲೋಡ್ ಮಾಡಿರುವ ಬಳಕೆದಾರರು ತಕ್ಷಣವೇ ಡಿಲೀಟ್ ಮಾಡುವಂತೆ ಕೇಳಿಕೊಂಡಿದೆ. ಅದರಂತೆ ನೀವು ಜಾಗರೂಕರಾಗಿರಬೇಕಾದ 40 ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿ ಹೀಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments