Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜುಲೈ 1 ರಿಂದ ಬ್ಯಾನ್ ಆಗಲಿರುವ ಪ್ಲಾಸ್ಟಿಕ್

ಜುಲೈ 1 ರಿಂದ ಬ್ಯಾನ್ ಆಗಲಿರುವ ಪ್ಲಾಸ್ಟಿಕ್
bangalore , ಗುರುವಾರ, 30 ಜೂನ್ 2022 (18:14 IST)
ಪರಿಸರಕ್ಕೆ ಹಾನಿಮಾಡ್ತರುವ ಏಕ ಬಳಕೆ ಪ್ಲಾಸ್ಟಿಕ್ ನ್ನ  ನಿಷೇಧ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ . ಈಗಾಗಲ್ಲೇ ಪ್ಲಾಸ್ಟಿಕ್ ನಿಷೇಧವಿದ್ರು ಕೆಲವೊಂದು ಕಡೆ ಪ ಬಳಸ್ತಿದ್ದಾರೆ. ಆದ್ರೆ ಇನ್ಮುಂದೆ ಹಾಗೆ ಆಗದಂತೆ  ಪೂರ್ಣ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡುವ ದಿಸೆಯಲ್ಲಿ ಕ್ರಮಕೈಗೊಳ್ಳ್ಳಲಾಗ್ತಿದೆ.ದಿನ ನಿತ್ಯದ ಜೀವನದಲ್ಲಿ ಗೊತ್ತಿದೋ, ಗೊತ್ತಿಲ್ಲದೆಯೋ ಪ್ಲಾಸ್ಟಿಕ್ ಬಳಸಲಾಗುತ್ತದೆ. ಈಗಾಗಲ್ಲೇ ಪ್ಲಾಸ್ಟಿಕ್ ನಿಷೇಧವಿದ್ರು ಮಾರ್ಕೆಟ್ ಗಳಲ್ಲಿ ಪ್ಲಾಸ್ಟಿಕ್ ಯತ್ತೇಚ್ಚವಾಗಿ ಬಳಸಲಾಗುತ್ತದೆ. ದಿನಸಿ ಸೇರಿದಂತೆ ಹೂ , ಹಣ್ಣು ತರಲು ಪ್ಲಾಸ್ಟಿಕ್ ಕವರ್ ನ್ನ ಮಾರ್ಕೆಟ್ ಗಳಲ್ಲಿ ಅನಗತ್ಯವಾಗಿ ಉಪಯೋಗಿಸಲಾಗ್ತಿದೆ. ಆದ್ರೆ ಇನ್ಮುಂದೆ ಪ್ಲಾಸ್ಟಿಕ್ ಎಲ್ಲಿಯೂ ಉಪಯೋಗಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿ ನಾಳೆಯಿಂದ ಹೊಟೇಲ್ ಗಳಲ್ಲಿ , ದಿನಸಿ ಅಂಗಡಿಗಳಲ್ಲಿ, ಐಸ್ ಕ್ರೀಂ ಪಾರ್ಲರ್ ಗಳಲ್ಲಿ ಪ್ಲಾಸ್ಟಿಕ್ ಕವರ್ ನ್ನ ಸಂಪೂರ್ಣವಾಗಿ ನಿಷೇಧ ಮಾಡುವಂತೆ ಆದೇಶಿಸಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಬಳಸಿರುವುದು ಕಂಡು ಬಂದ್ರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗ್ತದೆ.

ಇನ್ನು ನಾಳೆಯಿಂದ ಏನೇನು ನಿಷೇಧ ಅಂತಾ ನೋಡುವುದಾದ್ರೆ
 
-ಪ್ಲಾಸ್ಟಿಕ್ ಕಡ್ಡಿಯ ಇಯರ್ ಬಡ್ಸ್
-ಪ್ಲಾಸ್ಟಿಕ್ ಕಡ್ಡಿಯ ಬಲೂನ್
-ಪ್ಲಾಸ್ಟಿಕ್ ಧ್ವಜ, ಕ್ಯಾಂಡಿ ಕಡ್ಡಿ
-ಐಸ್ ಕ್ರೀಂ ಕಡ್ಡಿ, ಥರ್ಮೋಕೋಲ್
-ಪ್ಲಾಸ್ಟಿಕ್ ತಟ್ಟೆ, ಲೋಟ
-ಪೋರ್ಕ್ , ಕತ್ತರಿ, ಚಮಚ
-ಸ್ಟ್ರಾ, ಟ್ರೇಗಳು, ಪ್ಯಾಕಿಂಗ್
-ಸಿಹಿತಿಂಡಿಗಳಿಗೆ ಸುತ್ತುವ ಹಾಳೆಗಳು, ಆಹ್ವಾನಪತ್ರಗಳು,
-ಸಿಗರೇಟ್ ಪ್ಯಾಕೆಟ್ , 100 ಮೈಕ್ರಾನ್ ಗಿಂತ ಕಡಿಮೆಯಿರುವ ಪ್ಲಾಸ್ಟಿಕ್, ಪಿವಿಸಿ ಬ್ಯಾನರ್
 
 ಪ್ಲಾಸ್ಟಿಕ್ ನಿಷೇಧದ ಕುರಿತು ಆದೇಶ ಹೊರಬೀಳುತ್ತಿದ್ದಂತೆ ಹೊಟೇಲ್ ಉದ್ಯಮಗಳು, ಅಂಗಡಿ-ಮುಗ್ಗಟ್ಟುಗಳು ಎಚ್ಚೇತ್ತುಕೊಳ್ಳಲು ಮುಂದಾಗಿದ್ದಾರೆ, ಆದಷ್ಟು ಪ್ಲಾಸ್ಟಿಕ್ ಬಳಸದಿರಲು ತೀರ್ಮಾನ ಮಾಡಿಕೊಂಡಿದ್ದಾರೆ. ಪ್ಲಾಸ್ಟಿಕ್ ಬದಲಿಗೆ ಪರ್ಯಾಯ ಮಾರ್ಗ ಕಂಡುಕೊಳ್ಳಲು ತೀರ್ಮಾನಿಸಿದ್ದಾರೆ. ಇನ್ನು ನಾಳೆಯಿಂದ ಆದೇಶ ಪಾಲನೆಯಾಗುತ್ತಿದೀಯಾ ಇಲ್ವಾ ಎಂದು ಪರಿಶೀಲಿಸಲು ವಿಶೇಷ ತಂಡಗಳು ರಚನೆಯಾಗಲಿವೆ. ಇದೇ ವಿಷಯವಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ನಿಯಂತ್ರಣ ಕೊಠಡಿ ಕೂಡ ಆರಂಭವಾಗಲಿದ್ದು, ಜನರು ಪೊರ್ಟಲ್ ಮೂಲಕ ಕೂಡ ದೂರು ನೀಡಬಹುದಾಗಿದೆ. ಹೀಗಾಗಿ  ಈ  ಮಹತ್ವವಾದ ಆದೇಶವನ್ನ ಉದ್ಯಮಿಗಳು, ಜನಸಾಮಾನ್ಯರು ಕೂಡ ಸ್ವಾಗತಿಸಿದ್ದಾರೆ.ಸ್ಟಿಕ್ ಬ್ಯಾನ್ ಮಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗ್ತಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಜನರು ಶ್ಲಾಂಘನೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಪ್ಲಾಸ್ಟಿಕ್ ನಿಷೇಧದ ಆದೇಶವನ್ನ ಉದ್ಯಮಿಗಳು ಮತ್ತು ಜನರು ಯಾವ ರೀತಿ ಪಾಲನೆ ಮಾಡ್ತಾರೆ ಎಂದು ಕಾದುನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಗರದ ಮಕ್ಕಳಿಗೆ ಹೆಮ್ಮಾರಿಯಂತೆ ಕಾಡುತ್ತಿರುವ ಡೆಂಗ್ಯೂ ಜ್ವರ