ರಾಜ್ಯದಲ್ಲಿ ಫೋನ್ ಟ್ಯಾಪಿಂಗ್ ವಿಷಯ ಸದ್ದು ಮಾಡುತ್ತಿರುವಾಗಲೇ ಪಕ್ಷೇತರ ಶಾಸಕರೊಬ್ಬರು ಹೊಸ ಸುದ್ದಿ ಸ್ಫೋಟ ಮಾಡಿದ್ದಾರೆ.
ಕೋಲಾರದ ಮುಳಬಾಗಲಿನಲ್ಲಿ ಪಕ್ಷೇತರ ಶಾಸಕ ಎಚ್.ನಾಗೇಶ್ ಹೇಳಿಕೆ ನೀಡಿದ್ದಾರೆ. ಭಾರತ ದೇಶದತ್ತ ಎಲ್ಲರೂ ಕಣ್ಣು ಬಿಟ್ಟು ನೋಡುವಂತೆ ಮಾಡುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಹಾಗಾಗಿ ಅವರ ಹೆಜ್ಜೆಯಲ್ಲಿ ಸಾಗೋಣ, ಅವರ ಸಾಧನೆಗಳನ್ನ ಹೇಳೋಣ ಎಂದು ಬಿಜೆಪಿಗೆ ಬೆಂಬಲ ನೀಡಿದ್ದೇನೆ ಎಂದಿದ್ದಾರೆ.
ಇಂದಿರಾಗಾಂಧಿ ನಂತರ ದೇಶವನ್ನ ಯಾರು ಸರಿ ಮಾಡ್ತಾರೆ? ಎಂಬ ಆತಂಕ ಇತ್ತು, ಮೋದಿ ಬಂದ ನಂತರ ದೇಶ ಸರಿಯಾಗಿದೆ. ಮೋದಿ ಯಂತಹ ಲೀಡರ್ ಇರುವಾಗ ನಮಗೆ, ನಮ್ಮ ದೇಶಕ್ಕೆ ಯಾವುದೇ ಭಯವಿಲ್ಲ. ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತೆ, ಅಭಿವೃದ್ದಿಗಾಗಿ ನಾನು ಈ ನಿರ್ಧಾರ ಮಾಡಿದ್ದೇನೆ ಅಂತ ಹೇಳಿದ್ರು.
ಸುಭದ್ರ ಸರ್ಕಾರ ಮಾಡುವವರಿಗೆ ನನ್ನ ಬೆಂಬಲ, ಕ್ಷೇತ್ರದ ಮುಖಂಡರು, ಮತದಾರರ ನಿರ್ಧಾರದಂತೆ ಈ ಹೆಜ್ಜೆ ಇಟ್ಟಿದ್ದೇನೆ ಅಂತ ಹೇಳಿದ್ದಾರೆ.
ಸುಭದ್ರ ಸರ್ಕಾರಕ್ಕೆ ನಾನೇನ್ ವಾಚ್ ಮೆನ್ ಆಗಿರೋಕ್ಕಾಗಲ್ಲ, ಸುಬಧ್ರವಾಗಿರುವ ಸರ್ಕಾರಕ್ಕೆ ನನ್ನ ಬೆಂಬಲ ಎಂದ ಪಕ್ಷೇತರ ಶಾಸಕ ಎಚ್.ನಾಗೇಶ್, ದೂರವಾಣಿ ಕದ್ದಾಲಿಕೆ ಸಾಧ್ಯತೆ ಇದೆ ಎಚ್ಚರವಾಗಿರಿ ಎಂದು ಹೇಳಿದ್ರು. ಆದ್ರೂ ಕೂಡ ನಾನು ನೇರವಾಗಿ ದೂರವಾಣಿಯಲ್ಲಿ ಮಾತನಾಡುತ್ತಿದ್ದೆ, ನಾನೇನು ಅ ವ್ಯವಹಾರ ಮಾಡಿಲ್ಲ, ಕಳ್ಳನೂ ಅಲ್ಲ ಅಂತ ಹೇಳಿದ್ದಾರೆ.