ಕೊರೊನಾದಿಂದ ವ್ಯಕ್ತಿಯೊಬ್ಬನ ಸಾವಿಗೆ ಖಾಸಗಿ ಆಸ್ಪತ್ರೆ ಕಾರಣವಾಗಿದ್ದು, ಆಸ್ಪತ್ರೆಗೆ ಬೀಗ ಹಾಕಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ಸಚಿವರೊಬ್ಬರು ಹೇಳಿದ್ದಾರೆ.
ದೇಶದಲ್ಲಿ ಮೊದಲ ಕೊರೊನಾದಿಂದ ಸಾವು ಕಲಬುರಗಿ ನಗರದಲ್ಲಿ ಸಂಭವಿಸಿತ್ತು. ಆದರೂ ಬುದ್ದಿ ಕಲಿಯದ ಖಾಸಗಿ ಆಸ್ಪತ್ರೆಯೊಂದು ರೋಗಿ ಸಂಖ್ಯೆ 177 ನನ್ನು ಎರಡು ದಿನ ಇಟ್ಟುಕೊಂಡು ಜಿಲ್ಲಾಸ್ಪತ್ರೆಗೆ ಮಾಹಿತಿ ನೀಡಿರಲಿಲ್ಲ.
ಕೊನೆಗೆ ಇಎಸ್ ಐಸಿ ಆಸ್ಪತ್ರೆಗೆ ದಾಖಲು ಮಾಡಿ ಪರೀಕ್ಷೆ ನಡೆಸಿದಾಗ ಕೊರೊನಾ ಇರೋದು ದೃಢಪಟ್ಟಿತ್ತು. ಆದರೆ ರೋಗಿ ಅಷ್ಟರಲ್ಲಿ ಸಾವನ್ನಪ್ಪಿದ್ದಾನೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಇನ್ಮುಂದೆ ಕಲಬುರಗಿಯಲ್ಲಿ ಓಡಾಡುವವರು ಕಡ್ಡಾಯವಾಗಿ ಮಾಸ್ಕ ಧರಿಸಬೇಕು ಅಂತ ಸಚಿವರು ಹೇಳಿದ್ದಾರೆ.