ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಬಹುನಿರೀಕ್ಷೆಯ ಹುಬ್ಬಳ್ಳಿ -ಅಂಕೋಲಾ ರೈಲುಮಾರ್ಗಕ್ಕೆ ಮತ್ತೆ ಅಡಚಣೆ ಉಂಟಾಗಿದ್ದು, ಪರಿಷ್ಕೃತ ಯೋಜನೆ ಸಿದ್ಧಪಡಿಸಬೇಕೆಂದು ಕೇಂದ್ರ ವನ್ಯಜೀವಿ ಮಂಡಳಿಯ ಸಮಿತಿ ಅಭಿಪ್ರಾಯಪಟ್ಟಿದೆ.
ಈಗಿರುವ ಯೋಜನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೆಲವು ಬದಲಾವಣೆಯನ್ನು ಮಾಡಿ ಪರಿಷ್ಕೃತ ಪ್ರಸ್ತಾಪ ಸಲ್ಲಿಸಬೇಕು. ಈಗಿರುವ ಯೋಜನೆ ಪ್ರಸ್ತಾಪ ದೊಡ್ಡ ಮಟ್ಟದ ಅರಣ್ಯನಾಶಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಆದರೆ ಯೋಜನೆಯನ್ನು ಸಂಪೂರ್ಣ ತೆಗೆದುಹಾಕುವ ಕುರಿತು ಹೇಳದೇ ಇರುವುದರಿಂದ ಮತ್ತೊಮ್ಮೆ ಹುಬ್ಬಳ್ಳಿ-ಅಂಕೋಲಾ ರೈಲುಮಾರ್ಗದ ಕನಸು ಚಿಗುರೊಡೆದಿದೆ.