ಚಳ್ಳಕೆರೆಯಲ್ಲಿ ಚರಂಡಿಗಳಿಲ್ಲದೆ ತ್ಯಾಜ್ಯ ನೀರು ನಿಂತು ಸೊಳ್ಳೆ ಉತ್ಪತ್ತಿ ಕೇಂದ್ರವಾಗ್ತಿದೆ. ಸಾಂಕ್ರಮಿಕ ರೋಗಗಳು ಹರಡುವ ಭೀತಿಯಲ್ಲಿಯೇ ಜನರು ಜೀವನ ನಡೆಸುತ್ತಿದಾರೆ. ಕೂಡಲೇ ಚರಂಡಿ ನಿರ್ಮಿಸುವಂತೆ ಸ್ಥಳೀಯರು ನಗರಸಭೆಗೆ ಒತ್ತಾಯಿಸಿದ್ದಾರೆ.
ಚಳ್ಳಕೆರೆ ನಗರಸಭೆ ವ್ಯಾಪ್ತಿಯ 18 ನೇ ವಾರ್ಡ್ ನ ಅಂಬೇಡ್ಕರ್ ನಗರದಲ್ಲಿ ಚರಂಡಿಗಳಿಲ್ಲದೆ ತ್ಯಾಜ್ಯ ನೀರು ರಸ್ತೆ ಪಕ್ಕದ ಗುಂಡಿಗಳಲ್ಲಿ ನಿಂತಿದೆ. ಇನ್ನು ಗುಂಡಿಗಳಲ್ಲಿ ನಿಂತಿರುವ ಕೊಳಚೆ ನೀರನ್ನು ಕೊಡದಲ್ಲಿ ತುಂಬಿ ಹಾಕುವ ಪರಿಸ್ಥಿತಿ ಜನರಿಗೆ ಅನಿವಾರ್ಯವಾಗಿದೆ. ಇಲ್ಲಿನ ಸ್ಥಳೀಯರು ನಗರಸಭೆ ಸದಸ್ಯರ ಗಮನ ಸೆಳೆದ ಪರಿಣಾಮವಾಗಿ ಸದಸ್ಯ ಕೆ.ಎಸ್.ರಾಘವೇಂದ್ರ ಚರಂಡಿ ಕಾಮಗಾರಿ ನಿರ್ಮಿಸುವಂತೆ ನಗರಸಭೆ ಅಧಿಕಾರಿಗಳಿಗೆ ಒತ್ತಡ ತಂದಿದ್ದಾರೆ.ಇದರ ಪರಿಣಾಮವಾಗಿ ಚಳ್ಳಕೆರೆ ಟೌನ್, ಅಂಬೇಡ್ಕರ್‌ನಗರದ 18ನೇ ವಾರ್ಡ್‌ನಲ್ಲಿ ಮೋಹನಚಾರಿ ಮನೆಯಿಂದ ಇಸಾಕ್‌ನ ಮನೆವರೆಗೆ 100 ಮೀಟರ್ ಬಾಕ್ಸ್ ಚರಂಡಿ ನಿರ್ಮಾಣಮಾಡಲಾಗಿದೆ.ಅಲ್ಲದೇ ಕಾಮಗಾರಿ ಪ್ರಾರಂಭಿಸಲು ಕೂಡ ಮುಂದಾಗಿದ್ದಾರೆ.
ಸ್ಥಳೀಯ ಮುಖಂಡನೊಬ್ಬ ಕಾಮಗಾರಿಗೆ ಅಡ್ಡಿ ಪಡಿಸಿದ್ದರಿಂದ ಕಾಮಗಾರಿ ನಿಲ್ಲಿಸಿರುವುದರಿಂದ ಸ್ಥಳೀಯರಿಗೆ ತೊಂದರೆಯಾಗಿದ್ದು, ಕೂಡಲೇ ಕಾಮಗಾರಿ ಪ್ರಾರಂಭಿಸುವಂತೆ ಸ್ಥಳೀಯರು ನಗರಸಭೆ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.