ಪ್ರತಿನಿತ್ಯ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ತಾಲೂಕು ಕಚೇರಿ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಜನರಿಲ್ಲದೆ ಬಣಗುಡುತ್ತಿದೆ.
ನಗರದ ತಾಲೂಕು ಕಚೇರಿಯಲ್ಲಿ ಬುಧವಾರ ಜನರಿಲ್ಲದೆ ಬಿಕೋ ಎನ್ನುತ್ತಿತು.ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಅಧಿಕಾರಿಗಳು ಚುನಾವಣಾಪೂರ್ವ ತಯಾರಿಯಾಗಿ ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆ ಸಾರ್ವಜನಿಕರ ಕೆಲಸ ಕಾರ್ಯಗಳು ನೇಪಥ್ಯಕ್ಕೆ ಸರಿದಿವೆ. ಚುನಾವಣೆ ಮುಗಿಯುವವರೆಗೂ ತಮ್ಮ ಕೆಲಸ ಕಾರ್ಯಗಳು ಆಗುವುದಿಲ್ಲ ಎಂಬುದು ಮನಗಂಡ ಸಾರ್ವಜನಿಕರು ಮತ್ತು ಗ್ರಾಮೀಣ ಭಾಗದ ರೈತರು ತಾಲೂಕು ಕಚೇರಿಗೆ ಭೇಟಿಗೆ ತಾತ್ಕಾಲಿಕ ವಿರಾಮ ನೀಡಿದ್ದಾರೆ.
ತಿಂಗಳಿಂದ ನಿರಂತರವಾಗಿ ಬೀಳುತ್ತಿದ್ದ ಜಡಿ ಮಳೆಯು ನಿಂತಿದ್ದು ಅಳಿದಿರುವ ಕೃಷಿ ಬೆಳೆಗಳ ಕಟಾವು ಮಾಡುವ ಕೆಲಸದಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಲೆ ಸಾರ್ವಜನಿಕರು ಮತ್ತು ಗ್ರಾಮೀಣ ಭಾಗದ ರೈತರು ತಾಲೂಕು ಕಚೇರಿಗೆ ಬಾರದೇ ಜನರಿಲ್ಲದೆ ಬುಧವಾರ ಬಣಗುಡುತ್ತಿತ್ತು. ನಗರದಲ್ಲೂ ಜನಸಂಖ್ಯೆ ಓಡಾಟ ವಿರಳವಾಗಿರುವುದು ಕಂಡುಬಂತು.