Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಪಘಾತ ತಡೆಯುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರ ಕಾರ್ಯಕ್ಕೆ ಜನರ ಮೆಚ್ಚುಗೆ

ಅಪಘಾತ ತಡೆಯುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರ ಕಾರ್ಯಕ್ಕೆ ಜನರ ಮೆಚ್ಚುಗೆ
bangalore , ಮಂಗಳವಾರ, 18 ಅಕ್ಟೋಬರ್ 2022 (19:00 IST)
ಬೆಂಗಳೂರು ಮಹಾ ನಗರದ ಹೆಬ್ಬಾಗಿಲು ಅಂದ್ರೆ ಅದು ನೆಲಮಂಗಲ ಸಿಟಿ. ನಗರದಿಂದ ರಾಜ್ಯದ ಸುಮಾರು 17 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಎರಡು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಈ ಜಂಕ್ಷನ್ ನಲ್ಲಿ ಮಳೆಯ ನೀರಿನಿಂದ ಮಂಡಿಯುದ್ದದ ಗುಂಡಿಗಳದ್ದೇ ಕಾರುಬಾರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಟೋಲ್ ಕಂಪನಿಯ ನಿರ್ಲಕ್ಷ್ಯದಿಂದ ಗುಂಡಿಗಳನ್ನ ಮುಚ್ಚದೆ ಇದ್ದು ಪ್ರತಿನಿತ್ಯ ಇಲ್ಲಿ ವಾಹನಗಳು ಅಪಘಾತವಾಗಿ ಸವಾರರು ಜನರು ಸಂಕಷ್ಟಕ್ಕೆ ಸಿಲುಕಿ ಪರದಾಡುವಂತಾಗಿತ್ತು.
 
 ಪ್ರತಿನಿತ್ಯ ಈ ನೆಲಮಂಗಲದ ಕುಣಿಗಲ್ ಬೈಪಾಸ್ ಜಂಕ್ಷನ್ ನಲ್ಲಿ ವಾಹನಗಳ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಹೆಚ್ಚಾಗಿ ಸಂಚಾರಿ ಪೊಲೀಸರು ಹರಸಾಹಸ ಪಡುತ್ತಾರೆ, ಅದರಲ್ಲೂ ಶನಿವಾರ ಭಾನುವಾರ ಹೆಚ್ಚಿನ ಪ್ರಮಾಣದಲ್ಲಿ ಟ್ರಾಫಿಕ್ ದಟ್ಟಣೆ ಸಾಮಾನ್ಯವಾಗಿವೆ. ಅಪಘಾತ ತಡೆಯುವ ನಿಟ್ಟಿನಲ್ಲಿ ಸಂಚಾರಿ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಹೋಮ್ ಗಾಡ್೯ ಸಿಬ್ಬಂದಿ ಶಬ್ಬೀರ್ ಹಾಗೂ ಸಿಬ್ಬಂದಿಗಳು ಸೇರಿ ಮಂಡಿಯುದ್ದದ ಗುಂಡಿಗಳನ್ನ ಸಿಮೆಂಟ್ ಕಾಂಕ್ರೀಟ್ ಹಾಕಿ ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ. ಇನ್ನೂ ಈ ಗುಂಡಿಗಳಿಗೆ ಟೋಲ್ ರಸ್ತೆಯಲ್ಲಿ ನೀರಿನ ಪೈಪ್ ಹಾಳಾಗಿದ್ದು ನೀರು ಬಿದ್ದು ಬಿದ್ದು ಅನಾಹುತಕ್ಕೆ ಕಾರಣವಾಗಿದೆ. 
 
ನೆಲಮಂಗಲ ಸಂಚಾರಿ ಪೊಲೀಸರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು ವಾಹನ ಸವಾರರು ಹಾಗೂ ಸ್ಥಳೀಯ ಜನರ ಮೆಚ್ಚುಗೆ ಪಾತ್ರವಾಗಿದೆ. ಏನನ್ನಾದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಟೋಲ್ ಕಂಪನಿ ಇಂತಹ ಅಪಾಯಕಾರಿ ಗುಂಡಿಗಳನ್ನ ಮುಚ್ಚಿಸುವ ಕೆಲಸಕ್ಕೆ ಮುಂದಾಗಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾರಿಗೆ ಇಲಾಖೆಯಿಂದಲೇ ಓಲಾ, ಊಬರ್‌ಗಳ ದರ ನಿಗಧಿ..!