ಎರಡು ವರ್ಷ ಹಳೆಯ ಅನುಮತಿ ಪತ್ರಗಳನ್ನೇ ಬಳಸಿ ಬಿಬಿಎಂಪಿ ಗೆ ಕೋಟ್ಯಂತರ ರೂ ನಷ್ಟ ಉಂಟು ಮಾಡಿರುವ ಸಂಸ್ಥೆಗಳ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ,ಪರಿಶೀಲನೆ ನಂತರ ದಂಡ ವಿಧಿಸಲಾಗುತ್ತೆಎಲ್ಲೆಂದರಲ್ಲಿ ಕಸ ಸುರಿದರೆ ದಂಡ ಹಾಕಲಾಗುತ್ತೆ.ಪುಟ್ ಪಾತ್ ಸೇರಿದಂತೆ ನಗರದ ರಸ್ತೆಯ ಮೇಲೆ ಕಸ ಹಾಕುವವರ ವಿರುದ್ಧ ಮಾರ್ಷಲ್ ಗಳು ನಿಗಾವಹಿಸಲಿದ್ದಾರೆ. ನಗರದಲ್ಲಿ ಡೆಂಘೀ ಪ್ರಕರಣ ಹೆಚ್ಚದಂತೆ ಪಾಲಿಕೆ ನಿಗಾವಹಿಸಲಿದೆ.ರಸ್ತೆ ಅಗೆದ್ರು ಕ್ರಮಕೈಗೊಳ್ಳಲಾಗುತ್ತೆ ಅಂತಾ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.