ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್ ಗೆ ಸಿಎಂ ಸ್ಥಾನ ಲಭ್ಯವಾಗುತ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಬಳ್ಳಾರಿ ಸಂಸದ ವಿ.ಎಸ್.ಉಗ್ರಪ್ಪ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದಾರೆ.
ಪರಮೇಶ್ವರ್ ರವರಿಗೆ ಮುಖ್ಯಮಂತ್ರಿಯಾಗುವ ಎಲ್ಲಾ ವಿದ್ಯಾರ್ಹತೆ, ಸಾಮರ್ಥ್ಯವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾರ್ಟಿ ಮತ್ತು ಶಾಸಕರು ಅದರಲ್ಲೂ ಸಮ್ಮಿಶ್ರ ಆಗುವಂತಹ ಸಂದರ್ಭದಲ್ಲಿ ಖಂಡಿತಾ ಅವಕಾಶವಿದೆ.
ಅವರು ಮುಖ್ಯಮಂತ್ರಿ ಯಾದ್ರೆ ಖುಷಿಪಡೋದ್ರಲ್ಲಿ ನಾನು ಮೊದಲಿಗನಾಗುತ್ತೇನೆ. ಯಾಕಂದ್ರೆ ತುಮಕೂರು ಜಿಲ್ಲೆಗೆ ಮುಖ್ಯ ಮಂತ್ರಿ ಸ್ಥಾನ ಲಭ್ಯನೇ ಆಗಿಲ್ಲ. ಪರಮೇಶ್ವರ್ ಅವರ ಮೂಲಕ ಲಭ್ಯವಾಗುತ್ತೆ ಅಂದ್ರೆ ನಾವೆಲ್ಲರೂ ಖುಷಿ ಪಡೋ ಅಂತಾ ವಿಚಾರ ಎಂದರು.
ಪರಮೇಶ್ವರ್ ಅವರಿಗೆ ಅರ್ಹತೆ ಇದೆ, ಸೀನಿಯರ್ ಇದ್ದಾರೆ, ಪಕ್ಷದ ಅಧ್ಯಕ್ಷರಾಗಿದ್ದಾರೆ. ಆ ತರಹ ಅರ್ಹತೆ ಇರೋರು ಅನೇಕ ಜನರು ನಮ್ಮ ಪಕ್ಷದಲ್ಲಿದ್ದಾರೆ. ಮುಖ್ಯಮಂತ್ರಿ ಯಾಗುವಂತ ಅರ್ಹತೆ ಇರೋರು ಮಲ್ಲಿಕಾರ್ಜುನ್ ಖರ್ಗೆ ಸಾಹೆಬ್ರು ಇದ್ದಾರೆ. ಎರಡನೇ ಬಾರಿಗೆ ಸಿದ್ದರಾಮಯ್ಯನವರು ಸಿಎಂ ಆಗುವ ಅವಕಾಶಗಳಿವೆ.
ಡಿ.ಕೆ. ಶಿವಕುಮಾರ್, ಆರ್. ವಿ. ದೇಶಪಾಂಡೆ, ಹೆಚ್. ಕೆ. ಪಾಟೀಲ್ ಹೀಗೆ ಅನೇಕ ಜನ ಅರ್ಹತೆ ಇರತಕ್ಕಂತಹವರು ಇದ್ದಾರೆ ಎಂದಿದ್ದಾರೆ. ಅಂತಿಮವಾಗಿ ಪಕ್ಷದ ಹೈಕಮಾಂಡ್ ಮತ್ತು ಶಾಸಕರು ತೀರ್ಮಾನ ಮಾಡುತ್ತಾರೆ ಎಂದು ತುಮಕೂರಿನ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಬಳ್ಳಾರಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿಕೆ ನೀಡಿದ್ದಾರೆ.