ನಗರದ ಪ್ರತಿಷ್ಠಿಯ ಒರಾಯನ್ ಮಾಲ್ ಒಡೆದಲ್ಲಿ ಬೆಂಗಳೂರು ಬ್ರಾಂಡ್‌ಗೆ ಧಕ್ಕೆ ಬರಲಿದೆ. ಒರಾಯನ್ ಮಾಲ್ ಒಡೆಯುವುದು ಸರಿಯಲ್ಲ ಎಂದು ಒರಾಯನ್ ಮಾಲ್ ಮಾಲೀಕ ಜೈಶಂಕರ್ ಹೇಳಿದ್ದಾರೆ.
ರಾಜಕಾಲುವೆ ಮೇಲೆ ಕಾನೂನುಬಾಹಿರವಾಗಿ ಭೂ ಒತ್ತುವರಿ ಮಾಡಿಕೊಂಡು ಒರಾಯನ್ ಮಾಲ್ ಕಟ್ಟಿದ್ದರು ಬೆದರದ ಮಾಲೀಕ ಸರಕಾರಕ್ಕೆ ಸವಾಲ್ ಒಡ್ಡುವ ತಾಕತ್ತು ತೋರಿದ್ದಾನೆ.
ಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವ ಒರಾಯನ್ ಮಾಲೀಕ ಜೈಶಂಕರ್, ಒರಾಯನ್ ಮಾಲ್ ದೇಶದಲ್ಲಿಯೇ ಖ್ಯಾತಿ ಪಡೆದಿದ್ದು, ಒಂದು ವೇಳೆ, ಅದನ್ನು ಒಡೆದಲ್ಲಿ ಬೆಂಗಳೂರಿನ ಪ್ರತಿಷ್ಠೆಗೆ ಧಕ್ಕೆ ಬರಲಿದೆ ಎಂದು ಹೇಳಿದ್ದಾನೆ.
ಒರಾಯನ್ ಮಾಲ್ ಒಡೆದಲ್ಲಿ ಬೆಂಗಳೂರಿನ ಆರ್ಥಿಕ ಪರಿಸ್ಥಿತಿಯೇ ಹದಗೆಟ್ಟು ಹೋಗಲಿದೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ಒರಾಯನ್ ಮಾಲ್ ಅಕ್ರಮಗಳು ಗೊತ್ತಿದ್ದರೂ ಸರಕಾರವೇಕೆ ಕೈ ಕಟ್ಟಿ ಕುಳಿತಿದೆ. ಸಿಎಂ ಸಿದ್ದರಾಮಯ್ಯನವರ ಮೌನದ ಹಿಂದಿನ ಮರ್ಮವೇನು ಎಂದು ವಿಪಕ್ಷಗಳು ಪ್ರಶ್ನಿಸುತ್ತಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ