Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿಪಕ್ಷಗಳು ಪೂರಕವಾದ ಸಲಹೆ ನೀಡಲಿ: ಸಚಿವ ಖಾದರ್

ವಿಪಕ್ಷಗಳು ಪೂರಕವಾದ ಸಲಹೆ ನೀಡಲಿ: ಸಚಿವ ಖಾದರ್
ಬೆಂಗಳೂರು , ಬುಧವಾರ, 14 ಸೆಪ್ಟಂಬರ್ 2016 (16:40 IST)
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಪೂರಕವಾದ ಸಲಹೆ ನೀಡಲಿ. ಬದಲಾಗಿ ಜನರನ್ನು ದಾರಿ ತಪ್ಪಿಸುಂತಹ ಸಲಹೆ ಬೇಡ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಮೀರುವುದು ಸರಿಯಲ್ಲ. ಇಲ್ಲದಿದ್ದರೆ ಸರಕಾರದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.
 
ಶೀಘ್ರವೇ ರಾಜ್ಯದಲ್ಲಿ ಉಜ್ವಲ್ ಯೋಜನೆ ಜಾರಿಗೊಳಿಸುವಂತೆ ಕೇಂದ್ರ ಸರಕಾರದ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಮೇ 1 ರಂದು ದೇಶ್ಯಾದ್ಯಂತ ಉಜ್ವಲ್ ಯೋಜನೆ ಜಾರಿಯಾಗಿದೆ. ಆದರೆ, ರಾಜ್ಯದಲ್ಲಿ ಯೋಜನೆ ಜಾರಿಯಾಗಿಲ್ಲ ಎಂದರು.
 
ಉಜ್ವಲ್ ಯೋಜನೆ ಕುರಿತು ಕೇಂದ್ರ ಸರಕಾರಕ್ಕೆ ಸಾಕಷ್ಟು ಗೊಂದಲಗಳಿದ್ದವು. ಆದರೆ, ಇದೀಗ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ. ಆರಂಭದಲ್ಲಿ ಈ ಯೋಜನೆಯನ್ನು ಕೆಲವು ರಾಜ್ಯಗಳಲ್ಲಿ ಮಾತ್ರ ಜಾರಿ ಮಾಡಲಾಗಿತ್ತು. ಈ ಕುರಿತು ರಾಜ್ಯದಲ್ಲಿ ಚರ್ಚೆ ನಡೆದಿತ್ತು. ಶೀಘ್ರವೇ ರಾಜ್ಯದಲ್ಲಿ ಉಜ್ವಲ್ ಯೋಜನೆ ಜಾರಿಗೊಳಿಸುವಂತೆ ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ ಅವರನ್ಮು ಭೇಟಿ ಮಾಡುತ್ತೇನೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ, ಶಾಸಕರು, ಸಂಸದರು ಗಂಡಸ್ರಾ: ಶಾಸಕ ಬಾಲಕೃಷ್ಣ