ಪ್ರತಿಪಕ್ಷದ ಸದಸ್ಯರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿದ ಘಟನೆ ನಡೆದಿದೆ.
ಅಧ್ಯಕ್ಷರ ಕಾರು ಅಪಘಾತದ ವಿಚಾರವನ್ನು ಪ್ರತಿಪಕ್ಷದವರು ಪ್ರಸ್ತಾಪ ಮಾಡಿದರು. ಆಗ ಕಾರಿನ ವಿಚಾರ ತೆಗೆಯುತ್ತಿದ್ದಂತೆಯೇ ಕೆಂಡಾಮಂಡಲವಾದ ಅಧ್ಯಕ್ಷೆ ಶಿವಮ್ಮ, ನಿಮಗೆ ಉತ್ತರಿಸುವ ಅಗತ್ಯ ನನಗಿಲ್ಲ. ನನ್ನ ಉತ್ತರ ಅಧಿಕಾರಿಗಳಿಗೆ ನೀಡುತ್ತೇನೆ. ಸುಮ್ಮನೆ ಕುಳುತುಕೊಳ್ಳಿ ಎಂದು ಹೇಳಿದರು.
ಜಿಪಂ ಅಧ್ಯಕ್ಷೆಯ ಈ ಮಾತಿನಿಂದ ಸಿಡಿಮಿಡಿಗೊಂಡ ಪ್ರತಿಪಕ್ಷದ ಜನಪ್ರತಿನಿಧಿಗಳು, ಕಾನೂನಾತ್ಮಕವಾಗಿ ನೀವು ಉಲ್ಲಂಘನೆ ಮಾಡಿದ್ದೀರಿ. ನಮ್ಮನ್ನೇ ಕೇಳುವುದಕ್ಕೆ ಯಾರು ನೀವು ಅಂದ ಮೇಲೆ, ಅಧ್ಯಕ್ಷರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಘಟನೆಗೆ ಸಂಬಂಧಿಸಿದಂತೆ ಸರಿಯಾದ ಉತ್ತರ ಕೊಡದಿದ್ದಲ್ಲಿ, ಸಭೆ ಮುಂದುವರಿಸುವುದಿಲ್ಲ ಎಂದು ಪಟ್ಟು ಹಿಡಿದ ಪ್ರತಿಪಕ್ಷದ ಪ್ರತಿನಿಧಿಗಳು ಪ್ರತಿಭಟನೆಗೆ ಮುಂದಾದ ಘಟನೆ ನಡೆಯಿತು.