Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿಪಕ್ಷಗಳು ಕಾಂಗ್ರೆಸ್‌ನ್ನು ಭ್ರಷ್ಟಾಚಾರದ ಸ್ಮಾರಕ ಎಂದು ಬಿಂಬಿಸುತ್ತಿವೆ: ದಿನೇಶ್ ಗುಂಡೂರಾವ್

ವಿಪಕ್ಷಗಳು ಕಾಂಗ್ರೆಸ್‌ನ್ನು ಭ್ರಷ್ಟಾಚಾರದ ಸ್ಮಾರಕ ಎಂದು ಬಿಂಬಿಸುತ್ತಿವೆ: ದಿನೇಶ್ ಗುಂಡೂರಾವ್
ಬೆಂಗಳೂರು , ಗುರುವಾರ, 2 ಮಾರ್ಚ್ 2017 (14:38 IST)
ವಿಪಕ್ಷಗಳು ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ ಕಾಂಗ್ರೆಸ್ ಸರಕಾರ ಲಂಚ ಪಡೆದುಕೊಂಡಿದೆ. ಪಕ್ಷವನ್ನು ಭ್ರಷ್ಟಾಚಾರದ ಸ್ಮಾರಕ ಎಂದು ಬಿಂಬಿಸುತ್ತಿರುವುದರಿಂದ ಯೋಜನೆ ರದ್ದುಗೊಳಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 
 
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಪಾರದರ್ಶಕ ಅಡಳಿತಕ್ಕೆ ಹೆಚ್ಚಿನ ಒತ್ತು ನೀಡಿದೆ. ಸ್ಟೀಲ್ ಬ್ರಿಡ್ಜ್ ಯೋಜನೆಯಿಂದ ಸರಕಾರ ಯಾಕೆ ಕೆಟ್ಟ ಹೆಸರು ತೆಗೆದುಕೊಳ್ಳಬೇಕು, ಚುನಾವಣೆ ಬಳಿಕ ಯಾರು ಬರ್ತಾರೋ ಅವರು ಮಾಡ್ತಾರೆ ಬಿಡಿ ಎಂದು ತಿಳಿಸಿದ್ದಾರೆ.
 
ವಿಧಾನಪರಿಷತ್ ಸದಸ್ಯ ಗೋವಿಂದರಾಜು ಡೈರಿ ನನ್ನದಲ್ಲ, ಡೈರಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ವಿಪಕ್ಷಗಳು ಸರಕಾರದ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಬಿಜೆಪಿ ವಿಧಾನಪರಿಷತ್ ಸದಸ್ಯ ಲೆಹರ್‌ಸಿಂಗ್ ಬಳಿ ದೊರೆತಿರುವ ಡೈರಿ ನಕಲಿಯಾಗಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಗೋವಿಂದರಾಜು ಬಳಿಯಿರುವ ಡೈರಿ ಅಸಲಿ ಎಂದು ನಾಟಕವಾಡುತ್ತಿರುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರೈತರು ಸಂಕಷ್ಟದಲ್ಲಿದ್ದಾರೆ ಸಾಲ ಮನ್ನಾ ಮಾಡಿ: ಪ್ರಧಾನಿ ಮೋದಿಗೆ ಸಿಎಂ ಮನವಿ