ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಈ ನಡುವೆ ಕೈ ಪಡೆ ನಾಯಕರು ಗೆಲುವು ನಮ್ಮದೇ ಎನ್ನುತ್ತಿದ್ದಾರೆ.
ಕಲಬುರ್ಗಿಯಲ್ಲಿ ಡಿಸಿಎಂ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದು, ಚುನಾವಣೆಯಲ್ಲಿ ಎರಡು- ಮೂರು ವಿಚಾರಗಳನ್ನು ಗಮನಿಸಿದ್ದೇವೆ. ಜನರ ಆಶೀರ್ವಾದ ಪಡೆದು ಶಾಸಕರಾಗಿ, ಜನರ ತೀರ್ಪನ್ನು ತಿರಸ್ಕಾರ ಮಾಡಿ ಪಕ್ಷಾಂತರ ಮಾಡುವವರಿಗೆ ಜನ ಉತ್ತರ ಕೊಡಲಿದ್ದಾರೆ ಎಂದರು.
ಮತದಾರ ಖಂಡಿತಾ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಉತ್ತರ ಕೊಡ್ತಾರೆ ಅಂತ ವಿಶ್ವಾಸವಿದೆ.
ಚಿಂಚೋಳಿ ಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಬಿಜೆಪಿ ಮಾತನಾಡಲಿಲ್ಲ. ಕ್ಷುಲ್ಲಕ ವೈಯಕ್ತಿಕ ವಿಚಾರ ಮುಂದಿಟ್ಟು ಬಿಜೆಪಿ ಮತ ಕೇಳಿದೆ ಎಂದು ದೂರಿದ್ರು. ಬಿಜೆಪಿಯ ಆಪಾದನೆಗಳಿಗೆ ನಾವು ಉತ್ತರ ಕೊಟ್ಟಿದ್ದೇವೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಬಹುಮತದಿಂದ ಗೆಲ್ಲಲಿದೆ ಎಂದು ಡಿಸಿಎಂ ಪರಮೇಶ್ವರ್ ಹೇಳಿಕೆ ನೀಡಿದ್ರು.