ಪಬ್ನಲ್ಲಿ ಮದ್ಯ ಸೇವಿಸಿ ಪ್ರಜ್ಞೆ ತಪ್ಪಿದ್ದ ಯುವತಿಯ ಮೇಲೆ ಇಬ್ಬರು ಕಾಮುಕರು ಅಟ್ಟಹಾಸ ಮೆರೆದ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ರಾಜಧಾನಿ ಬೆಂಗಳೂರು ಮಹಿಳೆಯರಿಗೆ ಸೇಫ್ ಅಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ.
ಈಶಾನ್ಯ ಭಾರತದ ಯುವತಿ ಜನವರಿ 13 ರಂದು ಒಂಟಿಯಾಗಿ ಪಬ್ಗೆ ತೆರಳಿದ್ದಾಳೆ. ಈ ವೇಳೆ ಮದ್ಯ ಸೇವನೆ ಮಾಡಿ ಪ್ರಜ್ಞೆ ತಪ್ಪಿದ್ದ ಯುವತಿಯ ಮೇಲೆ ರಿಕ್ಕಿ ಅಲಿಯಾಸ್ ತಮ್ಮಣ್ಮ ಮತ್ತು ಯೆಮೆನ್ ಮೂಲದ ಅಯೂಬ್ ಎಂಬ ಕಾಮುಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಹೇಯ ಕೃತ್ಯಗಳು ಪಬ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಈ ಹೇಯ ಕೃತ್ಯವನ್ನು ನೋಡಿದ ಲೂಸಿ ಎಂಬ ಯುವತಿ ಆಕೆಯನ್ನು ರಕ್ಷಣೆ ಮಾಡಿದ್ದಾಳೆ ಎನ್ನಲಾಗಿದ್ದು, ಇದಾದ ಬಳಿಕ ರಿಕ್ಕಿ ಅಲಿಯಾಸ್ ತಮ್ಮಣ್ಮ ಮತ್ತ ಯೆಮೆನ್ ಮೂಲದ ಅಯೂಬ್ ಕಾರಿನಲ್ಲಿ ಯುವತಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ವೇಳೆ ಯುವತಿ ಕಿರುಚಾಡಿಕೊಂಡಾಗ ಅವಳನ್ನು ಕಮ್ಮನಹಳ್ಳಿ ಬಳಿ ಬಿಟ್ಟು ಆರೋಪಿಗಳ ಪರಾರಿಯಾಗಿದ್ದರು ಎಂದು ಹೇಳಲಾಗುತ್ತಿದೆ.
ಈ ಕುರಿತು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ