Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒಮಿಕ್ರಾನ್ ಆತಂಕ: ಕರ್ನಾಟಕದ ಪಾಲಿಗೆ ಗುಡ್ ನ್ಯೂಸ್!

ಒಮಿಕ್ರಾನ್ ಆತಂಕ: ಕರ್ನಾಟಕದ ಪಾಲಿಗೆ ಗುಡ್ ನ್ಯೂಸ್!
ಬೆಂಗಳೂರು , ಶನಿವಾರ, 25 ಡಿಸೆಂಬರ್ 2021 (12:27 IST)
ಬೆಂಗಳೂರು : ಮೂರನೆಯ ಅಲೆ ಭೀತಿಯಲ್ಲಿದ್ದ ಜನತೆಗೆ ಒಮಿಕ್ರಾನ್ ಸ್ವರೂಪದಲ್ಲಿ ಕೊರೊನಾ ಆತಂಕ ಎದುರಾಗಿದ್ದು,

ಅದರ ಮಧ್ಯೆ ಡೆಲ್ಮಿಕ್ರಾನ್ ಅಟಕಾಯಿಸಿಕೊಂಡಿದೆ. ಇವುಗಳ ಸಮ್ಮುಖದಲ್ಲಿ ಕರ್ನಾಟಕದ ಪರಿಸ್ಥಿತಿ ಹೇಗೆದೆ ಎಂದು ನೋಡುವುದಾದರೆ ಒಮಿಕ್ರಾನ್ ಆತಂಕದ ನಡುವೆಯೂ ಕರ್ನಾಟಕದ ಪಾಲಿಗೆ ಗುಡ್ ನ್ಯೂಸ್ ಇದೆ.

ದೇಶದ ಹಲವು ರಾಜ್ಯಗಳಲ್ಲಿ R ನಂಬರ್ ಸಂಖ್ಯೆ ಹೆಚ್ಚಿದೆ. ಆದರೆ ಕರ್ನಾಟಕದಲ್ಲಿ ಮಾತ್ರ R ನಂಬರ್ ಇಳಿಕೆಯಾಗಿದೆ. ಅಂದಹಾಗೆ, R ನಂಬರ್ ಎಂಬುದು ಕೊರೊನಾ ಸೋಂಕು ಹರಡುವುದರ ಸೂಚ್ಯಂಕವಾಗಿದೆ.

R ನಂಬರ್ ಅಂದರೆ ರೀ ಪ್ರೊಡಕ್ಟೀವ್ ನಂಬರ್ ಎಂದರ್ಥ. ಒಬ್ಬರಿಂದ ಎಷ್ಟು ಮಂದಿಗೆ ಸೋಂಕು ಹರಡುತ್ತಿದೆ ಎಂಬುದನ್ನುಸೂಚಿಸುವ ಸೂಚ್ಯಂಕ ಇದಾಗಿದೆ. ದೇಶದ ಹಲವು ರಾಜ್ಯದಲ್ಲಿ ವಾರದಿಂದ ವಾರಕ್ಕೆ R ನಂಬರ್ ಹೆಚ್ಚಳವಾಗುತ್ತಿದೆ.

ಆದರೆ ಕರ್ನಾಟಕದಲ್ಲಿ ಮಾತ್ರ R ನಂಬರ್ ಇಳಿಕೆ ಕಂಡಿದೆ! ನವೆಂಬರ್ ಮೊದಲ ವಾರಕ್ಕಿಂತಲೂ ಡಿಸೆಂಬರ್ ಮೂರನೇ ವಾರಕ್ಕೆ R ನಂಬರ್ ಕಡಿಮೆಯಾಗಿದೆ. ದೇಶದ ಎಂಟು ರಾಜ್ಯಗಳಲ್ಲಿ R ನಂಬರ್ ಹೆಚ್ಚಳಗೊಂಡಿದೆ. ಬಿಹಾರ, ಯುಪಿ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಉತ್ತರಾಖಂಡ ಹಾಗೂ ತೆಲಂಗಾಣದಲ್ಲಿ R ನಂಬರ್ ಆಕ್ಟೀವ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ! ರಾತ್ರಿ ಗುಂಪುಗೂಡುವುದು ನಿಷೇಧ