ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನ ಅಟ್ಟಹಾಸ ತಾರಕಕ್ಕೇರಿದ್ದು, ಬೆಂಗಳೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದೆ.
60 ವರ್ಷದ ವೃದ್ಧ ಕೊರೊನಾದಿಂದ ಸಾವನಪ್ಪಿದ್ದಾರೆ. ಬೆಂಗಳೂರಿನ ಶಂಕರಪಠ ನಿವಾಸಿಯಾಗಿದ್ದ ಸೋಂಕಿತ ವೃದ್ಧನಿಗೆಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆವೃದ್ಧ ಸಾವನಪ್ಪಿದ್ದಾರೆ. ಆ ಮೂಲಕಬೆಂಗಳೂರಿನಲ್ಲಿ ಕೊರೊನಾ ಈವರೆಗೆ 106 ಮಂದಿ ಬಲಿಯಾದಂತಾಗಿದೆ.
ಅಲ್ಲದೇ ಬೆಂಗಳೂರಿನಲ್ಲಿ ಕೊರೊನಾ ಬೆಂಬಿಡದೆ ಕಾಡುತ್ತಿದ್ದು, ಕೇವಲ 24 ಗಂಟೆಯಲ್ಲಿ 16 ವಾರ್ಡ್ ಗಳಲ್ಲಿ ಬರೋಬರಿ 315 ಕೇಸ್ ದಾಖಲಾಗಿದೆ ಎನ್ನಲಾಗಿದೆ.