Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಓಲಾ ಸಂಚಾರ ನಿಷೇಧ ಆದೇಶ ವಾಪಸ್; ಸಚಿವ ಪ್ರಿಯಾಂಕ್ ಖರ್ಗೆಯ ಕಾಲೆಳೆದ ನೆಟ್ಟಿಗರು

ಓಲಾ ಸಂಚಾರ ನಿಷೇಧ ಆದೇಶ ವಾಪಸ್; ಸಚಿವ ಪ್ರಿಯಾಂಕ್ ಖರ್ಗೆಯ ಕಾಲೆಳೆದ ನೆಟ್ಟಿಗರು
ಬೆಂಗಳೂರು , ಸೋಮವಾರ, 25 ಮಾರ್ಚ್ 2019 (12:14 IST)
ಬೆಂಗಳೂರು : ಓಲಾ ಸಂಚಾರ ನಿಷೇಧ ಆದೇಶ ವಾಪಸ್ ಪಡೆದುಕೊಂಡಿದ್ದಕ್ಕೆ ಸಚಿವ ಪ್ರಿಯಾಂಕ್ ಖರ್ಗೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಟ್ರೋಲ್ ಮಾಡಿದ್ದಾರೆ.


ಪರವಾನಿಗೆಯನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಆರು ತಿಂಗಳುಗಳ ಕಾಲ  ಓಲಾ ಸಂಚಾರಕ್ಕೆ  ಸಾರಿಗೆ ಇಲಾಖೆ ನಿಷೇಧ ಹೇರಿತ್ತು. ಬಳಿಕ  ಈ ಆದೇಶವನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ. ನಿಷೇಧ ವಾಪಸ್ ಪಡೆದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಭಾನುವಾರ ಬೆಳಗ್ಗೆ ಟ್ವೀಟ್ ಮಾಡಿ, ಇಂದಿನಿಂದ ಎಂದಿನಂತೆ ಓಲಾ ಸಂಚರಿಸಲಿದೆ ಎಂದು ಹೇಳಿಕೊಂಡಿದ್ದರು.


ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ  ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿದ್ದು, ಎಲೆಕ್ಷನ್ ಫಂಡ್ ಗೆ ಈ ಡ್ರಾಮಾನಾ ಅಂತಾ ಕೆಲವರು ಸಚಿವ ಖರ್ಗೆಯನ್ನು ಪ್ರಶ್ನಿಸಿದ್ದಾರೆ. ನಿಷೇಧ ಹೇರಿದ ಎರಡೇ ದಿನದಲ್ಲಿ ಹೇಗೆ ಸಮಸ್ಯೆ ಬಗೆಹರಿದಿದೆ? ಓಲಾ ನಿಷೇಧವನ್ನು ಅಷ್ಟು ಸುಲಭವಾಗಿ ಎರಡು ದಿನದಲ್ಲಿ ಬಗೆಹರಿಸಿದ್ದು ಹೇಗೆ? ಇದು ಎಲೆಕ್ಷನ್ ಫಂಡ್ ಗೆ ಮಾಡಿರುವ ಗಿಮಿಕ್ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಚಾರದ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ ಅಭ್ಯರ್ಥಿ