Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರವಾಹ ಸಂತ್ರಸ್ತರ ಹಣಕ್ಕೆ ಕನ್ನ ಹಾಕಿದ ಅಧಿಕಾರಿಗಳು

ಪ್ರವಾಹ ಸಂತ್ರಸ್ತರ ಹಣಕ್ಕೆ ಕನ್ನ ಹಾಕಿದ ಅಧಿಕಾರಿಗಳು
ಧಾರವಾಡ , ಶುಕ್ರವಾರ, 3 ಜನವರಿ 2020 (11:06 IST)
ಧಾರವಾಡ: ಪ್ರವಾಹ ಸಂತ್ರಸ್ತರಿಗೆ ನೀಡಿದ ಪರಿಹಾರದ ಹಣವನ್ನು ಅಧಿಕಾರಿಗಳು ವಾಪಾಸ್ ಪಡೆದಿರುವ ಆರೋಪ ಇದೀಗ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ಕೇಳಿಬಂದಿದೆ.



ಪ್ರವಾಹದಿಂದ ನೆಲಸಮವಾಗಿದ್ದ ಮನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ 1 ಲಕ್ಷ ರೂ.ಹಣ ನೀಡಿತ್ತು. ಗ್ರಾಮದ ಬಸನಗೌಡ ಪಾಟೀಲ್ ಹಾಗೂ ಚನ್ನಬಸವ ದೇವಿಕೊಪ್ಪ ಎಂಬ ಇಬ್ಬರು ಸಂತ್ರಸ್ತರ ಅಕೌಂಡ್ ಗೆ ಹಣ ಜಮೆಯಾಗಿತ್ತು. ಆದರೆ ಈ ಬಗ್ಗೆ ಕರೆ ಮಾಡಿ ತಿಳಿಸಿದ ಗ್ರಾಮಲೆಕ್ಕಿಗ ನೀವು ಸರ್ಕಾರಕ್ಕೆ 50000 ರೂ ಕಟ್ಟಬೇಕೆಂದು ಹೇಳಿ , ಹಣ ಕೊಡದಿದ್ದರೆ ಜಮೀನು, ಮನೆ ಸರ್ಕಾರದೆಂದು ಮಾಡಲಾಗುವುದು ಎಂದು ಬೆದರಿಸಿ ಹಣ ಕಿತ್ತುಕೊಂಡಿದ್ದಾನೆ ಎನ್ನಲಾಗಿದೆ.


ಈ ಬಗ್ಗೆ ಆರೋಪ ಮಾಡಿರುವ ಬಸನಗೌಡ ಪಾಟೀಲ್ ಹಾಗೂ ಚನ್ನಬಸವ ದೇವಿಕೊಪ್ಪ ಅವರು  ಹಣ ಸರ್ಕಾರಕ್ಕೆ ಕಟ್ಟದೆ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಅಧಿಕಾರಿಗಳನ್ನು ಈ ಬಗ್ಗೆ ಕೇಳಿದ್ರೆ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಗೆ ಮೂವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲು ಹೈಕಮಾಂಡ್ ನಿರ್ಧಾರ