Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅತೃಪ್ತರಿಗೆ ಸಚಿವ ಸ್ಥಾನದ ಆಫರ್: ಡಿಕೆಶಿ ಎಂಟ್ರಿಯಿಂದ ಏನಾಯ್ತು?

ಅತೃಪ್ತರಿಗೆ ಸಚಿವ ಸ್ಥಾನದ ಆಫರ್: ಡಿಕೆಶಿ ಎಂಟ್ರಿಯಿಂದ ಏನಾಯ್ತು?
ಬೆಂಗಳೂರು , ಶನಿವಾರ, 6 ಜುಲೈ 2019 (17:36 IST)
ಕಾಂಗ್ರೆಸ್ ಹಾಗೂ ಜೆಡಿಎಸ್ ನ ಹಿರಿಯ ನಾಯಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಏತನ್ಮಧ್ಯೆ ಸರಕಾರ ಉಳಿಸಿಕೊಳ್ಳಲು ಜೆಡಿಎಸ್, ಕಾಂಗ್ರೆಸ್ ಕೊನೆ ಕ್ಷಣದ ಪ್ರಯತ್ನಕ್ಕೆ ಮುಂದಾಗಿದೆ.

ಜೆಡಿಎಸ್ ಕಾಂಗ್ರೆಸ್ ಸೇರಿ 13 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಅತೃಪ್ತ ಶಾಸಕರ ಜತೆ ಮಾತನಾಡಿದ್ದು ಸಾಕಾಗಿದೆ ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ತೀವ್ರ ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ.

ಹೈಕಮಾಂಡ್ ಸೂಚನೆ ಹಿನ್ನಲೆಯಲ್ಲಿ ವಿಧಾನಸೌಧಕ್ಕೆ ಆಗಮಿಸಿರುವ ಸಚಿವ ಡಿ.ಕೆ.ಶಿವಕುಮಾರ್, ಅತೃಪ್ತರ ಮನವೊಲಿಕೆಗೆ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಸಚಿವ ಸ್ಥಾನದ ಆಫರ್ ಬಗ್ಗೆಯೂ ತಿಳಿಸಿದ್ದಾರೆ.

ಆದರೆ ಅದು ಅಷ್ಟಾಗಿ ವರ್ಕೌಟ್ ಆದಂತಿಲ್ಲ. ಜೆಡಿಎಸ್ ನ ಹಿರಿಯ ಶಾಸಕ ಹೆಚ್.ವಿಶ್ವನಾಥ, ಕಾಂಗ್ರೆಸ್ ನ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಸೇರಿದಂತೆ ಒಟ್ಟು 13 ಕ್ಕೆ ರಾಜೀನಾಮೆ ಸಲ್ಲಿಸಿದ ಶಾಸಕರ ಸಂಖ್ಯೆ ಏರಿದಂತಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್ಪಿ ಶಾಸಕ ನಾಟ್ ರೀಚೆಬಲ್ : ಮೈತ್ರಿಗೆ ಮತ್ತೊಂದು ವಿಘ್ನ