ಉಡುಪಿ : ಹಿಜಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ಭಿನ್ನ ತೀರ್ಪು ವ್ಯಕ್ತವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ದುಲಿಯಾ ಅವರು ನೀಡಿದ ತೀರ್ಪಿನ ಬಗ್ಗೆ ಹಿಜಬ್ ಪರ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಹಿಜಬ್ ಹೋರಾಟದ ನೇತೃತ್ವ ವಹಿಸಿದ ವಿದ್ಯಾರ್ಥಿನಿ. ಮಾರ್ಚ್ 15ರ ಹೈಕೋರ್ಟ್ ತೀರ್ಪಿನ ನಂತರ ಆಲಿಯಾ ಮತ್ತು ತಂಡ ಉಡುಪಿಯಲ್ಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ.
ಇದೀಗ ಸುಪ್ರೀಂಕೋರ್ಟ್ನಲ್ಲಿ ದ್ವಿಸದಸ್ಯ ಪೀಠದಿಂದ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ. ಈ ಸಂಬಂಧ ವಿದ್ಯಾರ್ಥಿನಿ ಭರವೆಸಯ ಟ್ವೀಟ್ ಮಾಡಿದ್ದಾರೆ.