ಅಕಾಲಿಕವಾಗಿ ಸುರಿದ ಮಳೆಗೆ ಭಾರೀ ಪ್ರಮಾಣದ ಬೆಳೆ ಹಾಳಾದ ಘಟನೆ ನಡೆದಿದೆ.
ದಾವಣಗೆರೆಯಲ್ಲಿ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಅಡಿಕೆ, ತೆಂಗು, ಭತ್ತ, ಮೆಕ್ಕೆಜೋಳ ಬೆಳೆ ನೆಲಕ್ಕುರುಳಿವೆ.
ದಾವಣಗೆರೆ ತಾಲ್ಲೂಕಿನ ಪುಟಗನಾಳು, ಹಿರೇಮೇಗಳಗೆರೆ, ಬೇತೂರು ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಸುಮಾರು ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದೆ. ಬೆಳೆಗಾರರಿಗೆ ಭಾರೀ ನಷ್ಟ ಉಂಟಾಗಿದೆ.
ಬುಡಸಮೇತ ಅಡಿಕೆ ಮರಗಳು ನೆಲಕ್ಕುರುಳಿವೆ, ಫಸಲಿಗೆ ಬಂದಿದ್ದ ಭತ್ತ ನೆಲಕ್ಕೆ ಬಿದ್ದಿದೆ. ರೈತರು ಕಣ್ಣೀರು ಇಡುವ ಪರಿಸ್ಥಿತಿ ಉಂಟಾಗಿದೆ. ಅಕಾಲಿಕವಾಗಿ ಧಾರಕಾರವಾಗಿ ಸುರಿದಿರುವ ಮಳೆ ಬೆಳೆಗಾರರ ಬದುಕು ಕೊಚ್ಚಿಕೊಂಡು ಹೋಗವಂತೆ ಮಾಡಿದೆ.