ಬೆಂಗಳೂರು-ಆಸ್ತಿ ತೆರಿಗೆ ವಸೂಲಿಗೆ ಪಾಲಿಕೆ ನಮ್ಮ ಮೆಟ್ರೋ ಗೆ ಬಿಸಿ ಮುಟ್ಟಿಸಿದ್ದು, ಮೆಟ್ರೋ ನಿಲ್ದಾಣಗಳಲ್ಲಿ ಇರುವ ಅಂಗಡಿ ಮುಂಗಟ್ಟುಗಳಿಗೆ ನೋಟೀಸ್ ನೀಡಲಾಗಿದೆ.ನಮ್ಮ ಮೆಟ್ರೊ ಸಂಸ್ಥೆಯಿಂದ ಬರಬೇಕಿರುವ 64 ಕೋಟಿ ರೂ. ಗಳಿಗೂ ಹೆಚ್ಚು ಆಸ್ತಿ ತೆರಿಗೆ ಪಾವತಿಸುವಂತೆ ಬಿಬಿಎಂಪಿ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ.
ಇದುವರೆಗೂ ತೆಪ್ಪಗಿದ್ದ ಬಿಬಿಎಂಪಿ ಅಧಿಕಾರಿಗಳು ಇದೀಗ ನಿದ್ರೆಯಿಂದ ಎದ್ದವರಂತೆ ದಿಢೀರ್ ನೋಟಿಸ್ ಜಾರಿ ಕೂಡಲೆ ತೆರಿಗೆ ಪಾವತಿಸುವಂತೆ ಸೂಚನೆ ನೀಡಿದ್ದಾರೆ. ತೆರಿಗೆ ವಸೂಲಿಗೆ ಬರೋಬ್ಬರಿ 30 ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳಿಗೆ ನೋಟಿಸ್ ಜಾರಿ ಮಾಡಿ ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ 4,500 ಕೋಟಿ ತೆರಿಗೆ ವಸೂಲಿಗೆ ಸರ್ಕಾರ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿ ಈ ವರ್ಷಾಂತ್ಯದೊಳಗೆ ಟಾರ್ಗೆಟ್ ರೀಚ್ ಮಾಡುವಂತೆ ತಾಕೀತು ಮಾಡಿತ್ತು.