ಮಹತ್ವಕಾಂಕ್ಷೆಯ ನೀರಾವರಿ ಯೋಜನೆಯಾದ ಮಹದಾಯಿ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಲು ವಿಪಕ್ಷವಾದ ಬಿಜೆಪಿ ಹಿಂದೇಟು ಹಾಕಿದೆ. ಒಂದು ವೇಳೆ ಪ್ರಸ್ತಾಪಿಸಿದಲ್ಲಿ ನಮ್ಮ ಬುಡಕ್ಕೆ ಬರುತ್ತದೆ ಎನ್ನುವ ಬಿಜೆಪಿ ನಾಯಕರ ಆತಂಕಕ್ಕೆ ಕಾರಣವಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಅಧಿವೇಶನದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಕೋನರೆಡ್ಡಿ, ಮಹದಾಯಿ ಯೋಜನೆ ಜಾರಿಗೆ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಬೇಧ ಮರೆತು ಒಂದಾಗಿ ರಾಜ್ಯದ ಹಿತವನ್ನು ರಕ್ಷಿಸಬೇಕು ಎಂದರು.
ಮಹದಾಯಿ ವಿಷಯದ ಬಗ್ಗೆ ಯಾರಾದರೂ ಮಾತನಾಡುವುದಿದ್ದರೇ ಮಾತನಾಡಿ ಎಂದು ಸ್ಪೀಕರ್, ಶಾಸಕರಿಗೆ ಮುಕ್ತ ಆಹ್ವಾನ ನೀಡಿದರು. ಆದರೆ, ಜೆಡಿಎಸ್ ಶಾಸಕರನ್ನು ಹೊರತುಪಡಿಸಿ, ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ಮೌನಕ್ಕೆ ಶರಣಾದರು ಎಂದು ಮೂಲಗಳು ತಿಳಿಸಿವೆ.
ಸಿಎಂ ಸಿದ್ದರಾಮಯ್ಯ ಮಾತನಾಡಿ ಮಹಾದಾಯಿ ವಿವಾದ ಇತ್ಯರ್ಥಕ್ಕೆ ಸರಕಾರ ಬದ್ಧವಾಗಿದೆ. ಅದಕ್ಕೆ ಬಿಜೆಪಿ ನಾಯಕರು ಮನಸ್ಸು ಮಾಡಬೇಕಾಗಿದೆ. ಯಾಕೆಂದರೆ, ಗೋವಾ ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರವಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.