ಬೆಂಗಳೂರು: ಮುಸ್ಲಿಮರ ಪವಿತ್ರ ಧಾರ್ಮಿಕ ಸ್ಥಳ ಹಜ್ ಯಾತ್ರೆಗೆ ಕೇಂದ್ರ ಸರ್ಕಾರ ಇದುವರೆಗೆ ಕೊಡಮಾಡುತ್ತಿದ್ದ ಸಬ್ಸಿಡಿ ಸ್ಥಗಿತಗೊಳಿಸಿರುವುದನ್ನು ಸಚಿವ ರೋಷನ್ ಬೇಗ್ ಸ್ವಾಗತಿಸಿದ್ದಾರೆ.
‘ಮುಸ್ಲಿಮರಿಗೆ ಹಜ್ ಯಾತ್ರೆಗೆ ಸಬ್ಸಿಡಿ ರದ್ದುಗೊಳಿಸಿರುವುದನ್ನು ರಾಜ್ಯ ಸರ್ಕಾರ ಸ್ವಾಗತಿಸುತ್ತದೆ. ನಮಗೆ ಸಬ್ಸಿಡಿ ಹಣ ಬೇಕಾಗಿಲ್ಲ. ಹಜ್ ಪವಿತ್ರ ಯಾತ್ರೆಯಾಗಿದ್ದು, ಇದನ್ನು ನಾವು ನಮ್ಮ ಸ್ವಂತ ಖರ್ಚಿನಿಂದಲೇ ಮಾಡುತ್ತೇವೆ. ಅದಕ್ಕೆ ಸರ್ಕಾರದ ಹಣ ಬೇಕಾಗಿಲ್ಲ’ ಎಂದು ಸಚಿವ ರೋಷನ್ ಬೇಗ್ ಪ್ರತಿಕ್ರಿಯಿಸಿದ್ದಾರೆ.
ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದವರು ಯಾವುದೇ ಓಲೈಕೆಗೆ ಮಣಿಯದೇ ತಮ್ಮ ಸ್ವ ಸಹಾಯದಿಂದ ಬದುಕಬೇಕು ಎಂಬ ಉದ್ದೇಶದಿಂದ ಸಬ್ಸಿಡಿ ರದ್ದುಗೊಳಿಸುತ್ತಿರುವುದಾಗಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಘೋಷಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ